Cnewstv.in / 07.12.2021/ ನ್ಯೂಯಾರ್ಕ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜೂಮ್ ಕಾಲ್ ನಲ್ಲಿ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾಗೊಳಿಸಿದ ಸಿಇಒ.
ನ್ಯೂಯಾರ್ಕ್ : ಅಮೆರಿಕ ಮೂಲದ ಸಂಸ್ಥೆಯೊಂದು ಜೂಮ್ ಕಾಲ್ ನಲ್ಲಿ 900ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾಗೊಳಿಸಿದೆ.
ಬೆಟರ್.ಕಾಮ್ ಎಂಬ ಅಮೆರಿಕ ಮೂಲದ ಸಂಸ್ಥಗೆ, ಭಾರತೀಯ ಮೂಲದ ವಿಶಾಲ್ ಗಾರ್ಗ್ ಸಿಇಒ ಅಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಸಂಸ್ಥೆಯ 900 ಸಿಬ್ಬಂದಿಗಳನ್ನು ಏಕಾಏಕಿ ಜೂಮ್ ಕಾಲ್ ನಲ್ಲಿ ಕೆಲಸದಿಂದ ತೆಗೆದು ಹಾಕಿದ್ದಾರೆ.
ಮಾರುಕಟ್ಟೆ ಕಾರ್ಯಕ್ಷಮತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯ ಕಾರಣ ನೀಡಿ ಏಕಾಏಕಿ 900 ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಜೂಮ್ ಕಾಲ್ ನಲ್ಲಿ ಮಾತನಾಡಿದ ಅವರು, ನೀವು ಈ ಕರೆಯಲ್ಲಿದ್ದರೆ, ಕೆಲಸದಿಂದ ವಜಾಗೊಳ್ಳುವ ದುರದೃಷ್ಟಕರ ಗುಂಪಿನಲ್ಲಿದ್ದೀರಿ ಎಂದು ಜೂಮ್ ಸಭೆಯಲ್ಲಿ ವಿಶಾಲ್ ಗರ್ಗ್ ತಿಳಿಸಿದ್ದಾರೆ.
ವರ್ಷದ ಈ ಅವಧಿಯಲ್ಲಿ ಉದ್ಯೋಗಕ್ಕೆ ಕತ್ತರಿ ಹಾಕುತ್ತಿರುವುದು ಕರುಳು ಹಿಂಡುತ್ತಿದೆ ಆದರೂ ಬ್ಯಾಲೆನ್ಸ್ ಶೀಟ್ ಹಾಗೂ ಮಾರುಕಟ್ಟೆಯ ಸ್ಥಿತಿಗಳಿಂದಾಗಿ ಈ ಕ್ರಮ ಕೈಗೊಳ್ಳಲೇಬೇಕಾಗಿದೆ ಎಂದು ಸಿಎಫ್ಒ ಕೆವಿನ್ ರ್ಯಾನ್ ತಿಳಿಸಿದ್ದಾರೆ.
ಇದನ್ನು ಒದಿ : https://cnewstv.in/?p=7072
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments