Breaking News

ರೈಲು ನಿಲ್ದಾಣದ ಬಳಿ ಅಪರಿಚಿತ ಶವ ಪತ್ತೆ.

Cnewstv.in / 24.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ರೈಲು ನಿಲ್ದಾಣದ ಬಳಿ ಅಪರಿಚಿತ ಶವ ಪತ್ತೆ.

ಶಿವಮೊಗ್ಗ : ಇಂದು ಶಿವಮೊಗ್ಗ ರೈಲು ನಿಲ್ದಾಣದ ಕಟ್ಟಡದ ಮುಂಭಾಗದಲ್ಲಿ ಸುಮಾರು 55 ರಿಂದ 60 ವಯಸ್ಸಿನ ಅಪರಿಚಿತ ಗಂಡಸು ಮೃತಪಟ್ಟಿದ್ದು, ಮೃತ ದೇಹವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ.

ಅಪರಿಚಿತ ಗಂಡಸು ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಎತ್ತರ ಸುಮಾರು 5.4 ಅಡಿ, ತಲೆಯಲ್ಲಿ ಸುಮಾರು 02 ಇಂಚು ಉದ್ದದ ಬಿಳಿ ಮತ್ತು ಕಪ್ಪು ಕೂದಲು, ಸುಮಾರು 1 ಇಂಚು ಬಿಳಿ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಬಲಗೈಯಲ್ಲಿ ತೆಲುಗು ಭಾಷೆಯಲ್ಲಿ 4 ಅಕ್ಷರದ ಹೆಸರಿನ ಹಚ್ಚೆ ಗುರುತಿದ್ದು ಸ್ಪಷ್ಟವಾಗಿ ಕಾಣುತ್ತಿರುವುದಿಲ್ಲ.

ಒಂದು ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಮತ್ತು ಕಪ್ಪು ಬಿಳಿ ಕೆಂಪು ಗೆರೆಯುಳ್ಳ ಅಡ್ಡ ಮತ್ತು ಉದ್ದ ಪಟ್ಟೆಯುಳ್ಳ ಪಂಚೆ, ಬಿಳಿ ಹಸಿರು ಬಣ್ಣದ ಅಡ್ಡ, ಉದ್ದ ಗೆರೆಯುಳ್ಳ ಟವೆಲ್, ನೀಲಿ ಬಣ್ಣದ ಯೂಸ್ ಅಂಡ್ ತ್ರೋ ಮಾಸ್ಕ್, ಒಂದು ಜೊತೆ ಬ್ರೌನ್ ಕಲರ್ ನ ಚಪ್ಪಲಿಗಳನ್ನು ಧರಿಸಿದ್ದು ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್-ಇನ್ಸಪೆಕ್ಟರ್, ದೂರವಾಣಿ ಸಂಖ್ಯೆ: 08182-22974, ಮೊ.ಸಂ: 94808-02124ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

ಇದನ್ನು ಒದಿ : https://cnewstv.in/?p=6884

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*