Breaking News

ನೇಪಾಳ : ಸರೋವರಕ್ಕೆ ಬಿದ್ದ ಕಾರು, ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವು.

Cnewstv.in / 15.11.2021/ ನೇಪಾಳ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕಠ್ಮಂಡು : ನೇಪಾಳದ ರೌತಹತ್‌ ಜಿಲ್ಲೆಯಲ್ಲಿ ಕಾರೊಂದು ಸರೋವರಕ್ಕೆ ಬಿದ್ದಿದ್ದು, ಒಂದೇ ಕುಟುಂಬದ ನಾಲ್ವರು ಭಾರತೀಯರು ಸಾವನ್ನಪ್ಪಿದ್ದಾರೆ.

ಮೃತರನ್ನು ಬಿಹಾರ ಮೂಲದ ದೀನನಾಥ ಸಾಹ್‌(25), ಅರುಣ್‌ ಸಾಹ್‌(30), ದಿಲೀಪ್‌ ಮಹತೊ(28) ಮತ್ತು ಅಮಿತ್‌ ಮಹತೊ(27) ಎಂದು ಗುರುತಿಸಲಾಗಿದೆ. ಅವರೆಲ್ಲರೂ ನೇಪಾಳದ ದೇವಾನಿ ಗೊನಾಹಿ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಛತ್‌ ಪೂಜೆ ಕಾರ್ಯಕ್ರಮಕ್ಕೆಂದು ತೆರಳಿದ್ದರು.

ಪೂಜೆ ಮುಗಿಸಿ ಶನಿವಾರ ರಾತ್ರಿ ಬರುವಾಗ ಈ ಘಟನೆ ನಡೆದಿದೆ. ಮದ್ಯಪಾನ ಸೇವಿಸಿ ಕಾರಿನಲ್ಲಿ ಹೊರಟಿದ್ದು, ಝುಂಖುನ್ವಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಸರೋವರದೊಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=6802

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*