Breaking News

ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ, ಸಮಯಪ್ರಜ್ಞೆ ಮೆರೆದ ರೈಲ್ವೆ ಪೊಲೀಸರು

Cnewstv.in / 10.11.2021/ ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಭಾರೀ ಅನಾಹುತ ತಪ್ಪಿದೆ. ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಮಹಿಳೆಯ ಜೀವ ಉಳಿದಿದೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯುವಾಗ ಮಹಿಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪ್ಲಾಟ್ ಫಾರಂ ಮೇಲೆ ಬಿದ್ದಂತಹ ಮಹಿಳೆಯನ್ನ ರೈಲ್ವೆ ಪೊಲೀಸರು ರಕ್ಷಿಸಿದ್ದಾರೆ. ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲಿನಿಂದ ಇಳಿಯುವಾಗ ಈ ಘಟನೆ ನಡೆದಿದೆ.‌ ಸಂಬಂಧಿಕರನ್ನು ಬಿಡಲು ಮಹಿಳೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ.

ವಿಡಿಯೋ ನ್ಯೂಸ್ 

ರೈಲ್ವೆ ಪೊಲೀಸ್ ಅಣ್ಣಪ್ಪ, ಸಂತೋಷ್, ಆರ್ ಪಿ ಎಫ್ ಸಿಬ್ಬಂದಿ ಜಗದೀಶ್ ಅವರು ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಆಯತಪ್ಪಿ ಬಿದ್ದ ಮಹಿಳೆ ಅಂತ ತಕ್ಷಣವೇ ರಕ್ಷಿಸಿದ್ದಾರೆ ನಡೆಯಬೇಕಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಒಟ್ಟಿನಲ್ಲಿ ಕೂದಲೆಳೆ ಅಂತರದಲ್ಲಿ ಮಹಿಳೆ ಬಚಾವಾಗಿದ್ದಾರೆ.

ಇದನ್ನು ಒದಿ : https://cnewstv.in/?p=6750

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*