Cnewstv.in /28.10.2021/ ಮುಂಬೈ/ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮುಂಬೈ : ಶಾರುಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಇಂದು ಜಾಮೀನು ಸಿಕ್ಕಿದೆ.
ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇರೆಗೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಲಾಗಿತ್ತು. ಇಂದು ಈ ಸಂಬಂಧ ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿತು.
ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರ ಮುಂದೆ ವಿಚಾರ ನಡೆಸಲಾಯಿತು. ಆರ್ಯನ್ ಖಾನ್ ಮತ್ತು ಸಹ ಅರೋಪಿಗಳಾದ ಅಬಾಜ್ ಮರ್ಚೆಂಟ್, ಮುನ್ ಮುನ್ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡುವಂತೆ ಆದೇಶಿಸಿದೆ.
ಅ. 3 ರಂದು ಆರ್ಯನ್ ಖಾನ್ ಅವರನ್ನು ಬಂಧಿಸಲಾಯಿತು. ಬಂಧನವಾದ 25 ದಿನಗಳ ನಂತರ ಜಾಮೀನು ಪಡೆದಿದ್ದಾರೆ. ಆದರೆ ನ್ಯಾಯಾಧೀಶರು ವಿವರವಾದ ಜಾಮೀನು ಆದೇಶವನ್ನು ನಾಳೆಗೆ ಇರಿಸಿದ್ದಾರೆ. ನಾಳೆ ಮಧ್ಯಾಹ್ನದ ಸಮಯಕ್ಕೆ ಜಾಮೀನಿನ ವಿಸ್ತೃತ ಆದೇಶ ಹೊರಡಿಸುವುದಾಗಿ ತಿಳಿಸಲಾಗಿದೆ.
ಆದ್ದರಿಂದ ಇಂದು ಆರ್ಯನ್ ಖಾನ್ ಜೈಲಿನಿಂದ ಹೊರಬರುವುದಿಲ್ಲ.
ಇದನ್ನು ಒದಿ : https://cnewstv.in/?p=6627
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv