Breaking News

ನಟ ಸೋನು ಸೂದ್ ಮನೆ ಮೇಲೆ ಐಟಿ ದಾಳಿ.

Cnewstv.in / 15.09.2021/ಮುಂಬೈ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಮುಂಬೈ : ಖ್ಯಾತ ಬಹುಭಾಷಾ ನಟ ಸೋನು ಸೂದ್ ಅವರ ಮನೆಯ ಮೇಲೆ ಇಂದು ಐಟಿ ದಾಳಿ ನಡೆದಿದೆ.

ಕೇವಲ ನಟನೆಯಿಂದ ಮಾತ್ರವಲ್ಲದೇ ಕೊರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹೆಸರಾಗಿದ್ದ ನಟ ಸೋನು ಸೂದ್ ಮನೆಯ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋನು ಸೂದ್ ರವರ ಮುಂಬೈ ಮನೆ, ಲಖನೌ ಕಂಪನಿ ಸೇರಿದಂತೆ ಆರು ಸ್ಥಳಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ಇತ್ತೀಚೆಗೆ ಸೋನು ಸೂದ್ ದೆಹಲಿಯ “ದೇಶ್ ಕಿ ಮೆಂಟರ್” ಕಾರ್ಯಕ್ರಮದ ರಾಯಭಾರಿಯಾಗಿ ಕೂಡ ನೇಮಕಗೊಂಡಿದ್ದರು. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ : https://cnewstv.in/?p=5961

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*