Cnewstv.in / 27.08.2021/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹೊಸನಗರ: ತಾಲೂಕಿನ ಅತ್ಯಂತ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹೊಸನಗರ ತಾಲೂಕು ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕೆಸರೆ ಗ್ರಾಮಕ್ಕೆ ಹೊಂದಿಕೊಂಡಿರುವ ಊರಿನಲ್ಲಿ ಸರಿಯಾದ ರಸ್ತೆ ಮಾರ್ಗಕ್ಕಾಗಿ ದಿನ ನಿತ್ಯ ಕಿರಿ ಕಿರಿ ಅನುಭವಿಸುವ ಗೋಳಾಟವನ್ನ ಕೇಳೋರಿಲ್ಲದೆ ಗ್ರಾಮಸ್ಥರು ಹೈರಾಣಗಿದ್ದಾರೆ.!
ಕಳೆದ ನಾಲ್ಕು- ಐದು ವರ್ಷದಿಂದ ಬಾಣಿಗ ದಿಂದ ಹುಣಸೆಕೊಪ್ಪ ನಿಂಬೇಸರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಕಿರು ಸೇತುವೆ ಸಹ ದುರಸ್ತಿ ಇಲ್ಲದೆ ಶಿಥಿಲಗೊಂಡಿವೆ. ಮಳೆಗಾಲದಲ್ಲಿ ನೀರಿನ ರಭಸಕ್ಕೆ ಕಿರು ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು. ರಸ್ತೆಯಲ್ಲಿ ಜನ ಓಡಾಡಲು ಹಾಗೂ ವಾಹನ ಚಲಾವಣೆ ಮಾಡಲು ಭಯಬೀತರಾಗಿದ್ದಾರೆ.
ದಿನ ನಿತ್ಯ ಶಾಲಾ ಮಕ್ಕಳು ಸಹ ಇದೆ ಮಾರ್ಗದಲ್ಲಿ ಸಂಚರಿಸುವ ದಾರಿಯಾಗಿದ್ದು, ಮಳೆಗಾಲದ ನೀರಿನ ಹರಿವಿಗೆ ಸೇತುವೆಯ ತಡೆಗೋಡೆ ಮುರಿದಿದೆ. ರಸ್ತೆ ಪಕ್ಕದಲ್ಲಿ ಮಣ್ಣು ಕುಸಿದು ಕಂದಕ ಸೃಷ್ಟಿಯಾಗಿದ್ದು, ಮಕ್ಕಳನ್ನ ಹೊರಗಡೆ ಕಳಿಸಲು ಪೋಷಕರಿಗೆ ತಲೆನೋವಾಗಿದೆ.
ಈ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ಥಳೀಯ ಆಡಳಿತ ಸಿಬ್ಬಂದಿಗಳಿಗೆ ಹಾಗೂ ಸದಸ್ಯರುಗಳ ಹತ್ತಿರ ಗ್ರಾಮಸ್ಥರು ಆಳನ್ನ ತೋಡಿಕೊಂಡರೂ ಏನು ಪ್ರಯೋಜನ ಆಗಿಲ್ಲ. ಇನ್ನಾದರು ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತಾ ಗಮನಹರಿಸಬೇಕು
ಇದನ್ನು ಒದಿ : https://cnewstv.in/?p=5609
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments