Cnewstv.in / 13.08.2021/ tokyo / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Mankind Pharma :
ಮ್ಯಾನಿಕೈಂಡ್ ಫಾರ್ಮಾ : ಒಲಂಪಿಕ್ ನಲ್ಲಿ ಪದಕ ವಂಚಿತರಾದ 20 ಭಾರತೀಯಾ ಕ್ರೀಡಾಪಟುಗಳಿಗೆ 11 ಲಕ್ಷ ಬಹುಮಾನ
ಟೋಕಿಯೋದಲ್ಲಿ ನಡೆದ ಒಲಂಪಿಕ್ ನಲ್ಲಿ ಈ ಬಾರಿ ಕೂದಲೆಳೆಯ ಅಂತರದಲ್ಲಿ ಪದಕದಿಂದ ವಂಚಿತರಾದ 20 ಭಾರತೀಯ ಕ್ರೀಡಾಪಟುಗಳಿಗೆ ತಲಾ 11 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಮ್ಯಾನಿಕೈಂಡ್ ಫಾರ್ಮಾ ಕಂಪೆನಿಯು ಪ್ರಕಟನೆಯನ್ನು ನೀಡಿದೆ.
ಒಲಂಪಿಕ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಹುರಿದುಂಬಿಸಿ, ಪ್ರೋತ್ಸಾಹಿಸಲು ಮ್ಯಾನಿಕೈಂಡ್ ಫಾರ್ಮಾ ಕಂಪೆನಿಯು ಮುಂದಾಗಿದೆ. ಮಹಿಳಾ ಹಾಕಿ ತಂಡದ 16 ಮಂದಿ ಆಟಗಾರರು, ಬಾಕ್ಸರ್ ಸತೀಶ್ ಕುಮಾರ್, ಶೂಟರ್ ಸೌರಬ್ ಚೌಧರಿ, ಅದಿತಿ ಅಶೋಕ್, ಕುಸ್ತಿಪಟು ದೀಪಕ್ ಪುನೀತ್ ಕೂದಲೆಳೆಯ ಅಂತರದಲ್ಲಿ ಪದಕ ಗೆಲ್ಲುವುದರಲ್ಲಿ ವಿಫಲರಾಗಿದ್ದಾರೆ ಆದರೆ ಕೋಟ್ಯಾಂತರ ಭಾರತೀಯರ ಮನಸ್ಸುಗಳನ್ನ ಗೆದ್ದಿದ್ದಾರೆ.
ಈ ಬಾರಿಯ ಒಲಿಂಪಿಕ್ಸ್ ಭಾರತೀಯರಿಗೆ ವಿಶೇಷವಾದಂತಹ ಸಂತಸ ಮತ್ತು ಹೆಮ್ಮೆಯಿಂದ ತಂದುಕೊಟ್ಟಿದೆ. ಕ್ರೀಡಾಪಟುಗಳ ಪರಿಶ್ರಮವನ್ನು ಪ್ರಶಂಸಿಸಲು ಮ್ಯಾನಿಕೈಂಡ್ ಫಾರ್ಮ ನೀಡುತ್ತಿರುವ ಬಹುಮಾನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನು ಒದಿ : https://cnewstv.in/?p=5393
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv