Cnewstv.in / Shivamogga / 11.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ನಗರದಲ್ಲಿ ದಿನೇ ದಿನೇ ಕೋವಿಡ್ ಸೊಂಕಿತರ ಪ್ರಮಾಣ ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದ್ದು ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಹೀಡಾಗಿರುವುದು ತಮಗೆ ತಿಳಿದಿರುವ ವಿಷಯ ವಾಗಿರುತ್ತದೆ. ಇಂತಹ ಕಠಿಣ ಸಂಧರ್ಭದಲ್ಲಿ ಪ್ರತಿಯೊಬ್ಬ ಸೊಂಕಿತರು ಅವಶ್ಯಕತೆ ಇದ್ದಲ್ಲಿ ಸಿಟಿಸ್ಕ್ಯಾನ್ ಮತ್ತು ಡಿ.ಡೈಮರ್ ಪರೀಕ್ಷೆಗಳನ್ನು ಮಾಡಿಸುವುದು ಅನಿವಾರ್ಯವಾಗಿದೆ ಇದರಿಂದ ಸೊಂಕಿತರಿಗೆ ಯಾವ ಪ್ರಮಾಣದಲ್ಲಿ ಕೊರೋನಾ ವೈರಸ್ ಹರಡಿದೆ ಹಾಗೂ ಮುಂದೆ ಆಗುವ ಅನಾಹುತಗಳನ್ನು ಕೂಡ ತಡೆಗಟ್ಟಲು ಅನುಕೂಲವಾಗುತ್ತದೆ.
ಸರ್ಕಾರವು ಈಗಾಗಲೇ ಸಿಟಿಸ್ಕ್ಯಾನ್ ಗೆ 1,500 ರೂಗಳನ್ನು ನಿಗದಿ ಪಡಿಸಿದೆ, ಆದ ಕಾರಣ ಬಡವರು ಕೂಲಿ ಕಾರ್ಮಿಕರು ಆಟೋ ಚಾಲಕರು ಈ ಹಣವನ್ನು ಬರಿಸಲು ಸಧ್ಯವಾಗದೇ ತಮ್ಮ ಪ್ರಾಣಗಳನ್ನು ಕಳೆದು ಕೊಳ್ಳುತ್ತಿದ್ದಾರೆ ಆದಕಾರಣ 2021-2022 ರ ಪಾಲಿಕೆ ಬಜೆಟ್ ನಲ್ಲಿ ಕೊರೋನಾ ನಿಯಂತ್ರಣಕ್ಕೆ ಮೀಸಲಿಟ್ಟಿರುವ 3 ಕೋಟಿ ಹಣದಲ್ಲಿ ತಕ್ಷಣ ಶಿವಮೊಗ್ಗದ ನಾಗರಿಕರಿಗೆ ಸಿಟಿಸ್ಕ್ಯಾನ್ ಮತ್ತು ಡಿ.ಡೈಮರ್ ಮಾಡಿಸಲು ತಲ 2,000 ರೂ ಸಹಾಯಧನವನ್ನು ಅವರ ರಶೀದಿ ಪಡೆದು ನೀಡಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ತಮಗೆ ಸಮಸ್ತ ಶಿವಮೊಗ್ಗ ನಾಗರೀಕರ ಪರವಾಗಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಆರ್ಸಿ ನಾಯಕ್, ಅಮೀರ್ ಖಾನ್ ಹಾಗೂ ಪಕ್ಷದ ಮುಖಂಡರಾದ ಕೆ ರಂಗನಾಥ್, ಪವನ್ ಭರತ್ ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments