Cnewstv.in / Shivamogga / 11.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಿವಮೊಗ್ಗ : ಪರಿಹಾರ ಕೊಡಲು ನಾವೇನು ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿದ್ದೀವಾ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಶಿವಮೊಗ್ಗ ಯುವ ಕಾಂಗ್ರೆಸ್ ತಿರುಗೇಟು ನೀಡಿದೆ
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್ ರವರು ಇಙದು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಸಚಿವರಾದ ಕೆಎಸ್ ಈಶ್ವರಪ್ಪನವರು ನಿನ್ನೆ ದಿನ ಕೊಟ್ಟಂತಹ ಹೇಳಿಕೆಯು ಬಾಲಿಶ ಹೇಳಿಕೆ ಆಗಿದ್ದು, ಈಶ್ವರಪ್ಪ ರವರು ಹೇಳಿದ್ದು ಸತ್ಯ ಇವರ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಆದರೆ ಪ್ರಿಂಟಾದ ನೋಟ್ ಗಳನ್ನು ಎಣಿಸುವ ಮಿಷನನ್ನು ತಮ್ಮ ಮನೆಯಲ್ಲಿ ಇಟ್ಟು ಕೊಂಡಿದ್ದಾರೆ
ರಾಜ್ಯದ ಗೆದ್ದಂತಹ ಬಿಜೆಪಿ ಸಂಸದರು ರಾಜ್ಯಕ್ಕೆ ಬರಬೇಕಾ ದಂತಹ ಕೇಂದ್ರ ಸರ್ಕಾರದ ಪರಿಹಾರವನ್ನು ಕೇಳಿದೆ ತಮ್ಮ ಬಾಯಿಗೆ ಬೀಗ ಜಡಿದು ಲಾಕ್ಡೌನ್ ಮನಸ್ಥಿತಿಯಲ್ಲಿ ಇರುವುದನ್ನು ಕಂಡರೆ ಇದು ಬೀಗ ಜಡಿದ ಲಾಕ್ಡೌನ್ ಬಿಜೆಪಿ ಸರ್ಕಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕರೋನ ವೈರಸ್ ಗಿಂತ ಈ ಬಿಜೆಪಿ ಎಂಬ ವೈರಸ್ ಸರ್ಕಾರ ಅತಿ ಹೆಚ್ಚು ಅಪಾಯಕಾರಿಯಾಗಿದೆ
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments