Cnewstv.in / Shivamogga
ಶಿವಮೊಗ್ಗ : ಕೊರೊನಾ ಲಸಿಕೆಯನ್ನು ಪಡೆಯಲು ಜನ ಮುಂಜಾನೆ 6 ಗಂಟೆ ಯಿಂದಲೇ ಸಾಲುಗಟ್ಟಿ ನಿಂತಿದ್ದಾರೆ.
ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಮುಂಭಾಗದಲ್ಲಿ ಆಧಾರ್ ಕಾರ್ಡ್ ಹಿಡಿದು ಜನ ಬೆಳ್ಳಗೆ ಯಿಂದ ಸಾಲುಗಟ್ಟಿ ನಿಂತಿದ್ದಾರೆ. ಒಂದು ದಿನಕ್ಕೆ 200 ಜನಕ್ಕೆ ವ್ಯಾಕ್ಸಿನೇಷನ್ ನೀಡಲಾಗುತ್ತದೆ. ವ್ಯಾಕ್ಸಿನೇಷನ್ ಪಡೆಯುವವರು ಮೊದಲು ಟೋಕನ್ ತೆಗೆದುಕೊಳ್ಳಬೇಕು, ಟೋಕನ್ ಬೆಳ್ಳಿಗೆ 9 ಗಂಟೆಯಿಂದ ನೀಡಲಾಗುತ್ತದೆ ಆದರೆ ಜನ ಟೋಕನ್ ಪಡೆಯಲು ಬೆಳಗ್ಗೆ 6 ಗಂಟೆಯಿಂದಲೇ ಕ್ಯೂನಲ್ಲಿ ನಿಂತಿದ್ದಾರೆ.
ಇನ್ನಷ್ಟು ವ್ಯಾಕ್ಸಿನೇಷನ್ ಸೆಂಟರ್ ಗಳನ್ನು ಹೆಚ್ಚಿಸಬೇಕು ಇಲ್ಲದಿದ್ದರೆ ಹೆಚ್ಚಿನ ಜನಕ್ಕೆ ವಾಕ್ಸಿನೇಶನ್ ನೀಡಬೇಕು ಅಂತ ಜನರು ಒತ್ತಾಯಿಸುತ್ತಿದ್ದಾರೆ.
*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ*
*9916660399*

C News TV Kannada News Online in cnewstv