ಶಿವಮೊಗ್ಗ : ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ದುರಸ್ತಿ ಕಾಮಗಾರಿ ಅವಧಿಗಿಂತ ಮೊದಲೇ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.
ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ ರೈಲ್ವೇ ಮೇಲ್ಸೇತುವೆಯ ಸ್ಟ್ರಿಪ್ ಸೀಲ್ ಅಳವಡಿಕೆಗಾಗಿ ಕಾಮಗಾರಿ ನಿರ್ವಹಿಸಲು ಜಿಲ್ಲಾಧಿಕಾರಿ ಅವರು ಏಕಮುಖ ಸಂಚಾರ ಆದೇಶಿಸಿ, ಒಂದು ತಿಂಗಳ ಒಳಗಾಗಿ ದುರಸ್ತಿ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ತಿ ಕಾಮಗಾರಿ ಕೈಗೊಂಡು 21ದಿನಗಳಲ್ಲಿ ಪೂರ್ಣಗೊಳಿಸಿ ಇದೀಗ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಹೊಸದಾಗಿ 8ಮೀಟರ್ ಉದ್ದದ 21 ಸ್ಟ್ರಿಪ್ ಸೀಲ್ ಜಾಯಿಂಟ್ಗಳನ್ನು ಅಳವಡಿಸಿ, ಡಾಂಬರೀಕರಣ ಹಾಗೂ ಪ್ಯಾರಾಪಿಟ್ ವಾಲ್ಗಳಿಗೆ ಬಣ್ಣ ಬಳಿದು ಕಾಮಗಾರಿ ಪೂರ್ಣಗೊಳಿಸಲಾಗಿದೆ.
C News TV Kannada News Online in cnewstv