ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್
ಸ್ಥಾನಕ್ಕೆ ಸುನಿತಾ ಅಣ್ಣಪ್ಪ ಮತ್ತು ರೇಖಾ ರಂಗನಾಥ ಅವರು ನಾಮಪತ್ರ ಸಲ್ಲಿಸಿದ್ದರು. ಸುನಿತಾ ಎಸ್ ಅವರ ಪರವಾಗಿ 25 ಹಾಗೂ ರೇಖಾ ಪರವಾಗಿ 11 ಮಂದಿ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಶಿವಮೊಗ್ಗ ಪಾಲಿಕೆಯಲ್ಲಿ ಸ್ಪಷ್ಟ ಬಹುಮತ ಬಿಜೆಪಿ ಹೊಂದಿತ್ತು.
ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಶಂಕರ್ ಮತ್ತು ಆರ್.ಸಿ.ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಶಂಕರ್ 25 ಹಾಗೂ ಆರ್.ಸಿ.ನಾಯ್ಕ್ 11 ಮತ ಪಡೆದರು..
*ಉಪಮೇಯರ್ ಪರ ಮತ ಚಲಾಯಿಸದ ಓರ್ವ ಬಿಜೆಪಿ ಸದಸ್ಯ*
ಚುನಾವಣೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಗದ ಕಾರಣ ನೊಂದು ಬಿಜೆಪಿಯ ಪಾಲಿಕೆ ಸದಸ್ಯ ರಾಜು.ಎಸ್.ಜಿ ಮತ ಚಲಾಯಿಸದೇ ತಟಸ್ಥವಾಗಿ ಉಳಿದರು. ಇದಕ್ಕೂ ಮುನ್ನ ರಾಜು ಪಾಲಿಕೆಯ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಿದ್ದರು, ನಂತರ ಬಿಜೆಪಿ ಮುಖಂಡರು ಮನವೊಲಿಸಿ ಚುನಾವಣಾ ಪ್ರಕ್ರಿಯೆಗೆ ಕರೆತಂದಿದ್ದ.
Recent Comments