ಶಿವಮೊಗ್ಗ : ಭಾರೀ ಜನಮನ್ನಣೆ ಪಡೆದಿದ್ದ ಈಸೂರು ಧಂಗೆ ಹೋರಿ ವಯೋ ಸಹಜ ಸಾವನಪ್ಪಿದೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ರೈತ ಕೊಪ್ಪದರ ಮಂಜಣ್ಣ ಎಂಬುವರು ಸಾಕಿದ್ದ ಹೋರಿ ಈಸೂರು ಧಂಗೆ.
ಶಿವಮೊಗ್ಗ, ಹಾವೇರಿ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಲ್ಲಿ ಭಾರೀ ಹೆಸರು ಗಳಿಸಿದ್ದು, ಅದನ್ನು ನೋಡಲೆಂದೇ ಹೋರಿಹಬ್ಬಕ್ಕೆ ಅಭಿಮಾನಿಗಳು ಹೋಗುತ್ತಿದ್ದರು.
ಈಸೂರು ಧಂಗೆ ಹೋರಿ ಸ್ಫರ್ಧೆಗೆ ಭಾಗವಹಿಸಿದರೇ ಬಹುಮಾನ ಫಿಕ್ಸ್ ಎನ್ನುವ ಮಟ್ಟಿಗೆ ಖ್ಯಾತಿ ಹೊಂದಿತ್ತು. 7 ಬೈಕ್, 15 ಫ್ರಿಜ್, 15 ಟಿವಿ, ಎತ್ತಿನಗಾಡಿ, ಬಂಗಾರ ಬಳೆ, 10ಕ್ಕೂ ಹೆಚ್ಚು ಗ್ರಾಂ ಬಂಗಾರ ಸೇರಿದಂತೆ ಹಲವು ಬಹುಮಾನ ಗೆದ್ದಿದ್ದ ಹೋರಿ. ನಿನ್ನೆ ಸಂಜೆ ವಯೋಸಹಜವಾಗಿ ಮೃತಪಟ್ಟಿದೆ.
ಹೋರಿಯ ಅಂತ್ಯಸಂಸ್ಕಾರಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಟ್ರಾಕ್ಟರ್ ನಲ್ಲಿ ಮೆರವಣಿಗೆ ಮೂಲಕ ಕೊಂಡೋಯ್ದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ
Recent Comments