Breaking News

ಮಾರ್ಚ್ 5 ರವರೆಗೆ ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿ

ಕನಕ ಮಂಟಪದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಮಾರಾಮಾರಿ ನಡೆದಿದ್ದು, ತದನಂತರದ ಬೆಳವಣಿಗೆಯಲ್ಲಿ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಮುಂಜಾಗೃತ ಕ್ರಮದ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ಸೆಕ್ಷನ್‌144 ನ್ನ ಜಾರಿಗೊಳಿಸಲಾಗಿದೆ.

ಈ ಪ್ರಕರಣದಲ್ಲಿ ಐದು ಎಫ್ಐಆರ್ ಆಗಿದ್ದು ಇದಕ್ಕೆ ಕೌಂಟರ್ ಆಗಿಯೂ ದೂರು ದಾಖಲಾಗಿದೆ. ಬಿಜೆಪಿಯಿಂದ ಪ್ರತಿಭಟನೆ, ಇಂದು ಕಾಂಗ್ರೆಸ್ ನಿಂದ ಪ್ರತಿಭಟನೆಗಳು ನಡೆದ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆಯ ವರದಿಯ ಆಧಾರದ ಮೇರೆಗೆ ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಭದ್ರಾವತಿಯ ತಹಶೀಲ್ದಾರ್ ಸಂತೋಷ್ ಕುಮಾರ್‌.ಜಿ ಆದೇಶಿಸಿದ್ದಾರೆ.

ಐದು ಜನರಿಗಿಂತ ಅಥವಾ ಐದಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ. ಮೆರವಣಿಗೆ, ಸಭೆ ಸಮಾರಂಭವನ್ನ ನಡೆಸದಂತೆ ನಿರ್ಬಂಧಿಸಲಾಗಿದೆ. ಮಾರಕಾಸ್ತ್ರಗಳು ಹಾಗೂ ಇತರೆ ಆಯುಧಗಳ ಸಂಗ್ರಹಣೆ ಮತ್ತು ಸಾಗಿಸುವುದನ್ನ ನಿಷೇಧಿಸಲಾಗಿದೆ.

ಯಾವುದೇ ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಪ್ರಚೋದಿಸುವ ಬಹಿರಂಗ ಘೋಷಣೆಗಳನ್ನ ಕೂಗುವುದು, ಸನ್ನೆ ಮಾಡುವುದು, ಸಂಗೀತ ನುಡಿಸುವುದಕ್ಕೂ ಬ್ರೇಕ್ ಹಾಕಲಾಗಿದೆ. ಹೀಗೆ 9 ಅಂಶಗಳನ್ನ ನಿರ್ಬಂಧಿಸಿ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

*