ಶಿವಮೊಗ್ಗ : ಗೋಪಾಲಗೌಡ ಬಡಾವಣೆಯ ವಿಶಾಲ್ ಮಾರ್ಟ್ ಎದುರು ಬೈಕ್ ವೊಂದು ಡಿವೈಡರ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ದರ್ಶನ್ (18 ) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಶ್ರೇಯಸ್ ನನ್ನ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಬೈಕ್ ಸವಾರರಿಬ್ಬರನ್ನೂ ನಂಜಪ್ಪ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ದರ್ಶನ್ ತಲೆಗೆ ತೀವ್ರಗಾಯಗಳಾದ ಪರಿಣಾಮ ಸಾವುಕಂಡಿದ್ದಾನೆ.
ಪಶ್ಚಿಮ ಸಂಚಾರಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿನ್ನೆ ಗೋಪಾಳಗೌಡ ಬಡಾವಣೆಯಲ್ಲಿ ಹೊನಲು ಬೆಳಕು ವಾಲಿಬಾಲ್ ನೋಡಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಶ್ರೇಯಸ್ ಸವಳಂಗ ರಸ್ತೆಯ ಉಷಾ ನರಸಿಂಗ್ ಹೋಮ್ ಬಳಿಯ ನಿವಾಸಿ ಆಗಿದ್ದರೆ, ದರ್ಶನ್ ಗಾಂಧಿಬಜಾರ್ ನ ಉಪ್ಪಾರ ಕೇರಿಯ ನಿವಾಸಿ ಎಂದು ತಿಳಿದುಬಂದಿದೆ.