Breaking News

ಭಗವದ್ಗೀತಾ ಪಾರಾಯಣ ಮತ್ತು ಕಂಠಪಾಠ ಮಹಾಯಜ್ಞ ಕಾರ್ಯಕ್ರಮ

 

ಶಿವಮೊಗ್ಗ : ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಪ್ರಸನ್ನನಾಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಭಗವದ್ಗೀತಾ ಪಾರಾಯಣ/ಕಂಠಪಾಠ ಮಹಾಯಜ್ಞ ಕಾರ್ಯಕ್ರಮವನ್ನು ಮನೆ ಮನಗಳಲ್ಲಿ ಮೊಳಗಿಸುವ ಕಾರ್ಯವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಸಂಸ್ಕೃತ ಭಾರತಿ, ವಾಸವಿ ವಿದ್ಯಾಲಯ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದೊಂದು ಸಮಾಜಮುಖೀ ಕಾರ್ಯಕ್ರಮವಾಗಿದ್ದು ಇದರಲ್ಲಿ ಸಮಾಜದ ಎಲ್ಲಾ ಬಂಧು ಬಾಂಧವರು ಮುಕ್ತವಾಗಿ ಭಗವದ್ಗೀತೆಯನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ.

*ಭಗವದ್ಗೀತಾ ಪಾರಾಯಣ/ಕಂಠಪಾಠ ಯಾಕೆ?*

ಭಗವದ್ಗೀತೆಯು ಮಾನವ ಸಮಾಜದ ಏಳಿಗೆಯನ್ನು ಬಯಸುತ್ತದೆ. ಜಾತಿ-ಜಾತಿಗಳ ನಡುವಿನ ಮನಸ್ತಾಪ, ಧರ್ಮಧರ್ಮಗಳ ನಡುವಿನ ಸಂಘರ್ಷದಿಂದ ಮುಕ್ತವಾದ ದೇಶ ನಿರ್ಮಾಣದ ಅವಶ್ಯಕತೆ ಇದೆ. ಇದನ್ನು ಸಾಧಿಸಲು ಭಗವದ್ಗೀತೆಯ ಅಧ್ಯಯನ ಅನಿವಾರ‍್ಯವೂ ಕೂಡ. ಈ ಭಗವದ್ಗೀತೆಯು ಕೇವಲ ಧಾರ್ಮಿಕ ಗ್ರಂಥವಾಗಿರದೆ ಇದರಲ್ಲಿ ವಿಜ್ಞಾನ. ತತ್ವಜ್ಞಾನ, ಮನೋವಿಜ್ಞಾನ ಮುಂತಾದ ಸಂಗತಿಗಳನ್ನೊಳಗೊಂಡ ಪವಿತ್ರ ಗ್ರಂಥವಾಗಿದೆ. ನಾವೆಲ್ಲರೂ ಒಂದು ಎಂಬ ಏಕತಾಭಾವನೆಯನ್ನು ಬೆಳೆಸಲು ಇದು ಸಹಕಾರಿಯಾಗಿದೆ. ಭಗವಂತನ ಸಾಯುಜ್ಯವನ್ನು ಪಡೆಯಲು ಭಗವದ್ಗೀತೆಯು ದಾರಿದೀಪವಾಗಿದೆ.

ಪಠಣ ಕ್ರಮ ಹೇಗೆ?

ಈ ಮಹಾಯಜ್ಞವು ೦೧-೦೧-೨೦೨೧ ರಿಂದ ೧೧-೧೨-೨೦೨೨ ರವರೆಗೆ ಒಟ್ಟು ೭೦೦ ದಿನಗಳ ಕಾಲ ನಡೆಯುತ್ತದೆ. ಭಗವದ್ಗೀತೆಯಲ್ಲಿ ಒಟ್ಟು ೭೦೦ ಶ್ಲೋಕಗಳಿದ್ದು ದಿನಕ್ಕೊಂದು ಶ್ಲೋಕ ಕಂಠಪಾಠ ಮಾಡಲು ಅನುಕೂಲವಾಗುವಂತೆ ಎಲ್ಲಾ ಶ್ಲೋಕಗಳನ್ನು ಈ ಯೋಜನೆಯಲ್ಲಿ ನೊಂದಾಯಿಸಿದವರಿಗೆ ಒಟ್ಟಿಗೆ ಕಳಿಸಿ ಕೊಡಲಾಗುತ್ತದೆ (ಕನ್ನಡ, ಇಂಗ್ಲೀಷ್, ಸಂಸ್ಕೃತ ಲಿಪಿಯಲ್ಲಿರುತ್ತದೆ) ಹಾಗೂ ಕಂಠಪಾಠ ಮಾಡುವ ಕ್ರಮವನ್ನೂ ಸಹ ತಿಳಿಸಿಕೊಡಲಾಗುವುದು, ದಿನಕ್ಕೆ ಕನಿಷ್ಟ ೧೦ ನಿಮಿಷ ಕಲಿಯಲು ಆಸಕ್ತಿ ಹೊಂದಿರಬೇಕು.

ಭಾಗವಹಿಸುವವರು ಅವರ ಹೆಸರನ್ನು ಡಿಸೆಂಬರ್ ೩೧ರೊಳಗೆ ಟಿ.ವಿ ನರಸಿಂಹಮೂರ್ತಿ- ೯೯೦೨೯೪೨೦೬೦ ಅಥವಾ ಅ.ನಾ.ವಿಜಯೇಂದ್ರ ರಾವ್ ೯೪೪೮೭೯೦೧೨೭ ಇವರಲ್ಲಿ ನೊಂದಾಯಿಸಿಕೊಳ್ಳಬೇಕಾಗಿ ಕೋರಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತ ಭಾರತಿ ಶಿವಮೊಗ್ಗ ನಗರ ಅಧ್ಯಕ್ಷರಾದ ಎನ್.ವಿ. ಶಂಕರನಾರಾಯಣ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅ.ನಾ.ವಿಜಯೇಂದ್ರ ರಾವ್, ಕೋಶಾಧ್ಯಕ್ಷರಾದ ಎನ್.ಆರ್.ಪ್ರಕಾಶ್, ನಿರ್ಧೆಶಕರಾದ ಮಾಲಾ ರಾಮಚಂದ್ರ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Crime Hosanagara JDS K S Eshwarappa madhu bangarappa M P Election MP election News NSUI police Sagara Shikaripura Shimoga shimoga district Shivammoga Shivamoga Shivamogga Soraba SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಗಂದೂರು

Recent Comments