ಶಿವಮೊಗ್ಗ : ಚಮಚವನ್ನು ಚಾಕು ರೀತಿ ಬಳಕೆ ಮಾಡಿ ಸಜಾಬಂಧಿಯೊಬ್ಬ ಮೂವರು ಸಜಾಬಂಧಿಗಳಿಗೆ ಇರಿದಿರುವ ಘಟನೆ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಇಂದು ಸಂಜೆ ನಡೆದಿದೆ. ನ್ಯಾಯಾಧೀಶರಿಗೆ ನಿಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜೈಲಿನಲ್ಲಿದ್ದ ಉಡುಪಿಯ ಪ್ರಶಾಂತ್ ಎಂಬ ಖೈದಿ ತನ್ನೊಂದಿಗಿದ್ದ ಮೂವರು ಖೈದಿಗಳನ್ನು ಇರಿದ ಆರೋಪಿ. ಇಂದು ಪ್ರಶಾಂತ್ ಓರ್ವ ಖೈದಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಈ ವೇಳೆ ಜೈಲಿನಲ್ಲಿ ಸಜಾಬಂಧಿಗಳಾಗಿರುವ ಮಾಲತೇಶ, ದೇವೇಂದ್ರ, ಬೆನಕಶೆಟ್ಟಿ ಎಂಬುವರು ಜಗಳ ಬಿಡಿಸಲು ಹೋಗಿದ್ದಾರೆ. ಆಗ ರೊಚ್ಚಿಗೆದ್ದ ಪ್ರಶಾಂತ್ ಈ ಮೂವರ ಮೇಲೆ ಚಮಚವನ್ನೇ ಚಾಕುವಿನಂತೆ ಬಳಸಿ ಚುಚ್ಚಿದ್ದಾನೆ. ಘಟನೆಯಲ್ಲಿ ಮೂವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ದೇವೇಂದ್ರ ಎಂಬುವರ ಸ್ಥಿತಿ ಗಂಭೀರವಾಗಿದೆ. ಮೂವರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recent Comments