ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ
ಶಿವಮೊಗ್ಗ : ವಿಧಾನ ಪರಿಷತ್‍ನಲ್ಲಿ ನಡೆದ ಘಟನೆಗಳಿಗೆ ಬಿಜೆಪಿಯೇ ನೇರ ಕಾರಣ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ಯನ್ನುದ್ದೇಶೀಸಿ ಮಾತನಾಡಿದ ಅವರು, ಸದನದಲ್ಲಿ ನಡೆದ ಗಲಾಟೆಗೆ ಬಿಜೆಪಿ ಕಾರಣವಾಗಿದ್ದರೂ ಸಹ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಸಮರ್ಥಿಸಿಕೊಳ್ಳುತ್ತಿ ರುವುದು ಖಂಡನೀಯ. ಮೊದಲನೇ ಹೆಂಡತಿ ಇದ್ದಾಗ ಎರಡನೇ ಮದುವೆ ಆಗೋದು ತಪ್ಪು. ಈ ಪರಿಷತ್ ಘಟನೆ ಕೂಡ ಆಗಿರುವುದು ಅದೇ ರೀತಿಯಲ್ಲೇ. ಪರಿಷತ್ ಸಭಾಪತಿಯವರನ್ನು ಕಲಾಪಕ್ಕೆ ಬರದಂತೆ ಬಾಗಿಲು ಮುಚ್ಚಿ ಅವರ ಅನುಮತಿ ಇಲ್ಲದೇ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡುಹಗಲೇ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿ ಅವರೇ ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಗಳನ್ನು ಅಕ್ರಮವಾಗಿ ಕೂರಿಸಿ ಸದನದಲ್ಲಿ ಮಾರ್ಷಲ್‍ಗಳಿಗೆ ಧಮುಕಿ ಹಾಕಿದ್ದಾರೆ. ಸದನದಲ್ಲಿದ್ದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹಾಗೂ ಕಾನೂನು ಸಚಿವರು ಈ ಘಟನೆಗೆ ನೇರ ಕಾರಣರಾಗಿರುವುದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಎಂದು ಕಿಮ್ಮನೆ ರತ್ನಾಕರ್ ಒತ್ತಾಯಿಸಿದ್ದಾರೆ.
Recent Comments