Breaking News

ಗ್ರಾಮ ಪಂಚಾಯ್ತಿ ಚುನಾವಣೆ-2020 ನೀತಿ ಸಂಹಿತೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯಿಂದ ಮಿಂಚಿನ ಕಾರ್ಯಾಚರಣೆ. ಹೊರರಾಜ್ಯದ ತೆರಿಗೆ ಪಾವತಿಸದ ಅಕ್ರಮ ಮದ್ಯ ವಶ

ಗ್ರಾಮ ಪಂಚಾಯ್ತಿ ಚುನಾವಣೆ-2020 ನಿಮಿತ್ತ ಚುನಾವಣೆಯನ್ನು ಮುಕ್ತ ಹಾಗೂ ನಿಷ್ಟಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯು ಖಚಿತ ಮಾಹಿತಿಯನ್ನು ಸಂಗ್ರಹಿಸಿ ಕ್ಯಾಪ್ಟನ್ ಅಜಿತ್ ಕುಮಾರ್, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಆರೋಪಿಯು ಕರ್ನಾಟಕ ರಾಜ್ಯದಲ್ಲಿ ತೆರಿಗೆಯನ್ನು ವಂಚಿಸಿ ಹೊರರಾಜ್ಯದ ತೆರಿಗೆ ಪಾವತಿಸದ ಅಕ್ರಮ ಮದ್ಯವನ್ನು ಗ್ರಾಮ ಪಂಚಾಯ್ತಿ ಚುನಾವಣೆಗೆ ಬಳಸುವ ಉದ್ದೇಶದಿಂದ ಕೆಎ-15-8249 ಆಟೋರಿಕ್ಷಾದಲ್ಲಿ ಗೋವಾ ರಾಜ್ಯದಲ್ಲಿ ತಯಾರಾದ ಮೆಕ್ಡೊನಾಲ್ಡ್ ವಿಸ್ಕಿ, ಇಂಪೀರಿಯಲ್ ವಿಸ್ಕಿ, ಗೋವಾ ಫೆನ್ನಿ ಸೇರಿದಂತೆ ಅಕ್ರಮವಾಗಿ 71 ಲೀಟರ್ ಗೋವಾ ಮದ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಲಾಗಿರುತ್ತದೆ. ಶ್ರೀ ಹನುಮಂತಪ್ಪ ಡಿ ಎನ್, ಅಬಕಾರಿ ನಿರೀಕ್ಷಕರು, ಜಿಲ್ಲಾ ವಿಚಕ್ಷಣಾ ದಳ ಇವರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *

*