ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಜನರಿಗೆ ಇದೊಂದು ಗುಡ್ ನ್ಯೂಸ್. ಜಿಲ್ಲೆಯಲ್ಲಿ ಗಣನೀಯವಾಗಿ ತಗ್ಗಲಾರಂಭಿಸಿದೆ ಕರೋನಾ. ಹೌದು ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಪ್ರತಿದಿನ ಮೂರಂಕಿ ದಾಟುತ್ತಿದ್ದ ಕರೋನಾ ಸೋಂಕಿತರ ಸಂಖ್ಯೆ ಇದೀಗ ಎರಡಂಕಿಗೆ ಇಳಿದಿದೆ. ಹೌದು ಕಳೆದ ವಾರದವರೆಗೂ ಪ್ರತಿದಿನ ಶಿವಮೊಗ್ಗ ಜಿಲ್ಲೆಯಲ್ಲಿ 350ರಿಂದ 370 ಕರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ 100ರ ಸಂಖ್ಯೆಗೆ ಇಳಿದಿತ್ತು. ಆದರೆ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕರೋನಾ ಸೋಂಕಿತರ ಸಂಖ್ಯೆ ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. ಹೌದು ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಕೇವಲ 43 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಇಂದು ಜಿಲ್ಲೆಯಲ್ಲಿ 886 ಜನರಿಗೆ ಕರೋನಾ ತಪಾಸಣೆ ಮಾಡಲಾಗಿದ್ದು ಅದರಲ್ಲಿ 43 ಜನರಲ್ಲಿ ಮಾತ್ರ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದೇ ರೀತಿ ಪ್ರತಿ ದಿನ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಾದಲ್ಲಿ ಇನ್ನು ಕೆಲವೇ ದಿನದಲ್ಲಿ ಶಿವಮೊಗ್ಗ ಕರೋನಾ ಮುಕ್ತ ಜಿಲ್ಲೆಯಾಗುವುದರಲ್ಲಿ ಅನುಮಾನವೆ ಇಲ್ಲ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾದಿಂದ 332 ಮಂದಿ ಮೃತಪಟ್ಟಿರುವುದು ಮಾತ್ರ ದುರಂತ.
- ಮಿಡಟೌನ್ ರೋಟರಿಗೆ ಐತಿಹಾಸಿಕ ಸಮಗ್ರ ಪ್ರಶಸ್ತಿ – ಹರ್ಷ ಕಾಮತ್ ...
- ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ನಾಪತ್ತೆ.. ...
- ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ. ...
- ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್.. ...
- ಏಪ್ರಿಲ್ ನಿಂದ ಸೆಪ್ಟೆಂಬರ್-2025 ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾಯಿದೆ ಉಲ್ಲಂಘನೆಯಡಿ 1,82,000 ಜನರಿಗೆ ದಂಡ : ವಿ.ಎಸ್. ಉಗ್ರಪ್ಪ ...
- ಜನರೇ ಮೆಚ್ಚಿದ ‘ಬಂಗಾರ’ದ ಮನುಷ್ಯ…… ಬಡವರ ಜೀವನಕ್ಕೆ ಆಧಾರವಾದ ಕನಸುಗಾರ… ...
- ಎನ್ಇಎಸ್ ಸಿಬ್ಬಂದಿಗಳಿಗೆ “ಆಡಳಿತ ನಿರ್ವಹಣೆ – ಕೌಶಲ್ಯತೆ ಕಾರ್ಯಾಗಾರ” ...
- ಚಿಕ್ಕಬಳ್ಳಾಪುರ ರೈತರಿಗೆ ಅನ್ಯಾಯ, ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪ ಖಂಡನಿಯ. ...
- ಅ.15 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ. ...
- ಅ.15 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ. ...
C News TV Kannada News Online in cnewstv