Breaking News

ಅಕ್ಟೋಬರ್ 9 & 10 ರಂದು ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ

ಶಿವಮೊಗ್ಗ : ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಕುಂಸಿ ಗ್ರಾಮದಲ್ಲಿ ನಿರಂತರ ಜ್ಯೋತಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ 110/11 ಕೆ.ವಿ. ಕುಂಸಿ ವಿದ್ಯುತ್ ವಿವಿ ಕೇಂದ್ರ ಎಫ್-2 ಕುಂಸಿ, ಎಫ್-3 ಸಿರಿಗೆರೆ, ಎಫ್-9 ಆಯನೂರು, ಎಫ್-10 ಹಾರ್ನಳ್ಳಿ ಮಾರ್ಗಗಳಿಂದ ಸರಬರಾಜಾಗುವ ಹಳ್ಳಿಗಳಾದ ಕುಂಸಿ, ಹಾರ್ನಳ್ಳಿ, ರಾಮನಗರ, ಕೆಸವಿನಕಟ್ಟೆ, ವಿಠಗೊಂಡನಕೊಪ್ಪ, ವೀರಣ್ಣನಬೆನವಳ್ಳಿ, ಮುದುಮಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ಟೋಬರ್-09 ಮತ್ತು 10 ರಂದು ಬೆಳಗ್ಗೆ 10.00 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕುಂಸಿ ಮೆಸ್ಕಾಂ ಪಾ&ನಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

*