ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಬಹುದಿನದ ಬೇಡಿಕೆಯಾಗಿದ್ದ ಔರದ್ಕರ್ ವರದಿಯನ್ನು ದೀಪಾವಳಿಯಿಂದ ಜಾರಿಗೊಳಿಸಲಾಗುವುದು ಎಂದು ಇತ್ತೀಚೆಗೆ ಸಿಎಂ ಬಿ.ಎಸ್.ವೈ ಹೇಳಿದ ಬೆನ್ನಲ್ಲೇ ಈ ವರದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಖಂಡನೆಗಳು ಆರಂಭವಾಗಿದ್ದವು. ಆದರೆ ಈಗ ಪೊಲೀಸ್ ಸಿಬ್ಬಂದಿಗಳೇ ಸಿಎಂಗೆ ಪತ್ರ ಬರೆದು ಔರಾದ್ಕರ್ ವರದಿಯನ್ನ ರದ್ದುಗೊಳಿಸಿ ಎಂದು ಒತ್ತಾಯಿಸಿದ್ದಾರೆ. ವೇತನ ತಾರತಮ್ಯ ನಿವಾರಣೆಗಾಗಿ ಔರಾದ್ಕರ್ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದರೆ ವರದಿ ಸಿದ್ಧಪಡಿಸುವಾಗ ಆರ್ಥಿಕ ಇಲಾಖೆ ತನ್ನ ಚಾಣಾಕ್ಷ್ಯತನವನ್ನು ತೋರಿಸಿದೆ ಎಂದು ಆರೋಪಿಸಲಾಗಿದು. ಡಿಜಿ ಹಾಗೂ ಐಜಿ ಹೊರಡಿಸಿದ್ದ ಫಿಟ್ಮೆಂಟ್ ಅಂತ ಮೂಲ ವೇತನ ನಿಗದಿಯಾಗಬೇಕಿತ್ತು. ಆದರೆ ಅದನ್ನು ರದ್ದುಪಡಿಸಿ ಕೇವಲ ಹೊಸದಾಗಿ ಸೇರ್ಪಡೆಯಾದ ಸಿಬ್ಬಂದಿಗೆ ಮಾತ್ರ ವೇತನ ನಿಗದಿ ಮಾಡಲಾಗಿದೆ. ಇದರಿಂದ ಔರಾದ್ಕರ್ ವರದಿ ಮೂಲ ಉದ್ದೇಶವನ್ನೇ ಮರೆಮಾಚಲಾಗಿದೆ ಎಂದು ಹೇಳಲಾಗುತ್ತಿದೆ.. ಈಗಿನ ವರದಿಯು ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಾಗೂ ಗೃಹ ಸಚಿವರು ತೀರ್ಮಾನಿಸಿ ಜಾರಿಗೊಳಿಸಿದಂತಿಲ್ಲ. ಈ ವರದಿಯ ಜಾರಿಯಿಂದ ಪೊಲೀಸರ ಜೀವನ ಮಟ್ಟ ಸುಧಾರಿಸುತ್ತೆ ಎಂದು ನಂಬಲಾಗಿತ್ತು. ಆದರೆ ಆರ್ಥಿಕ ಇಲಾಖೆಯು ಪೊಲೀಸ್ ಇಲಾಖೆಯ ಬಹುದಿನದ ಬೇಡಿಕೆಗೆ ತಣ್ಣೀರೆರಚಿದೆ. ವರದಿಯ ಮೂಲ ಉದ್ದೇಶವನ್ನು ಬಿಟ್ಟು ಆರ್ಥಿಕ ಇಲಾಖೆಯು ಹೊಸದಾಗಿ ವರದಿಯನ್ನು ಮಾರ್ಪಾಡು ಮಾಡಿರುವ ವರದಿ ಜಾರಿಯಾದ್ರೆ ವೇತನ ತಾರತಮ್ಯದಿಂದ ಪೊಲೀಸರು ವೈಯಕ್ತಿಕವಾಗಿ ಖಿನ್ನತೆಗೆ ಒಳಗಾಗೋ ಸಾಧ್ಯತೆ ಇದೆ..ಈ ವರದಿಯಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಶೇ95ರಷ್ಟು ಸಿಬ್ಬಂದಿಗೆ ಒಂದು ರೂಪಾಯಿ ಪ್ರಯೋಜನವಿಲ್ಲ. ಆದ್ದರಿಂದ ಸರ್ಕಾರ ರಾಘವೇಂದ್ರ ಔರಾದ್ಕರ್ ವರದಿಯ ಮೂಲ ಉದ್ದೇಶದ ಬೇಡಿಕೆಯನ್ನು ...
Read More »- ತುಂಗಾ ನದಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಶವ ಪತ್ತೆ ...
- ಪ್ರಧಾನಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸಂಸದ ಶ್ರೀ ಬಿ ವೈ ರಾಘವೇಂದ್ರ ಆಗ್ರಹ ...
- ಮಾಜಿ ನಗರಸಭಾ ಅಧ್ಯಕ್ಷರಾದ N J ರಾಜಶೇಖರ್ ಇನ್ನಿಲ್ಲ ...
- ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ ...
- ಕುವೆಂಪು ವಿಶ್ವವಿದ್ಯಾಲಯದ ಪ್ರವೇಶಾತಿಗೆ ಅವಧಿ ವಿಸ್ತರಣೆ. ...
- ದಸರಾ ಚಲನಚಿತ್ರೋತ್ಸವ… ...
- ಬೆಳ್ಳಿ ಅಂಬಾರಿಯ ಜಂಬೂಸವಾರಿಗೆ ಶಿವಪ್ಪನಾಯಕ ಅರಮನೆಯಲ್ಲಿ ಸಕಲ ಸಿದ್ಧತೆ ...
- ನವರಾತ್ರಿ ಸಂಭ್ರಮ.. ...
- ಶಿವಮೊಗ್ಗ ದಸರಾಕ್ಕೆ ಸಕ್ರೆಬೈಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ: ಅಂಬಾರಿ ಹೊರಲು ಸಾಗರಗೆ ತಾಲೀಮು ...
- ಶಿವಮೊಗ್ಗದಲ್ಲಿ ನ್ಯೂಸ್ 18 ಕನ್ನಡ ವಾಹಿನಿಯ ಕರುನಾಡ ಹಬ್ಬ ಕರುನಾಡ ಹಬ್ಬಕ್ಕೆ ನಿಮ್ಮ ಸಿ ನ್ಯೂಸ್ ಸಾಥ್! ...
Recent Comments