ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಬಿಜೆಪಿಯಿಂದ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ನಡೆದ ಗಾಂಧಿ ಸಂಕಲ್ಪಯಾತ್ರೆ ಇಂದು ಶಿವಮೊಗ್ಗ ನಗರದಲ್ಲಿ ನಡೆಯಿತು. ಬೆಳಗ್ಗೆ ಗುಡ್ಡೆಮರಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಸಂಸದ ರಾಘವೇಂದ್ರ ಪಾದಯಾತ್ರೆ ಆರಂಭಿಸಿದರು. ಬಳಿಕಬೈಪಾಸ್ ರಸ್ತೆ, ನ್ಯೂಮಂಡ್ಲಿ, ಎನ್.ಟಿ.ರಸ್ತೆ, ಆರ್ ಎಂಎಲ್ ನಗರ, ಬಸ್ ಸ್ಟಾಂಡ್‌ಮಾರ್ಗವಾಗಿ ಸಂಕಲ್ಪ ಯಾತ್ರೆ ನಡೆಯಿತು. ಗಾಂಧಿ ಸಂಕಲ್ಪ ಯಾತ್ರೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಎಸ್.ರುದ್ರೇಗೌಡ ಸಾಥ್ ನೀಡಿದರು.
Recent Comments