Breaking News

ಅನಾಥರು ಹಾಗೂ ಬುದ್ದಿಮಾಂದ್ಯರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಜನ್ಮ‌ದಿನಾಚರಣೆ

ಶಿವಮೊಗ್ಗ: ತಮ್ಮ ಆತ್ಮೀಯರೊಂದಿಗೆ ಸೇರಿ ಜನ್ಮ ದಿನ‌ ಆಚರಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ತಮ್ಮ ಜನ್ಮ‌ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಬೆಳಗ್ಗೆ ವಿದ್ಯಾನಗರದಲ್ಲಿರುವ ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಜನ್ಮ‌ದಿನ ಆಚರಿಸಿಕೊಂಡ ಸುಂದರೇಶ್ ಅವರು ಬಳಿಕ ವಿವೇಕಾನಂದ ಬಡಾವಣೆಯಲ್ಲಿರುವ ಜೀವನ ಸಂಜೆ ವೃದ್ಧಾಶ್ರಮದಲ್ಲಿ ವೃದ್ಧರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ನಂತರ ಕಾಂಗ್ರೆಸ್ ಕಚೇರಿಗೆ ಆಗಮಿಸಿ ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿ ಜನ್ಮ‌ದಿನ ಆಚರಿಸಿಕೊಂಡರು. ಬಳಿಕ ಗೋಪಾಳದ ಶಾರದದೇವಿ ಅಂದರ ವಿಕಾಸಕೇಂದ್ರ, ಆಲ್ಕೊಳದಲ್ಲಿರುವ ತಾಯಿ ಮನೆ, ಮಿಷನ್ ಕಾಂಪೋಂಡ್ ನಲ್ಲಿರುವ ಹ್ಯಾಪಿ ಹೋಮ್ ನಲ್ಲಿ ತಮ್ಮ ಜನ್ಮ ದಿನ ಆಚರಿಸಿಕೊಂಡರು. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಅನಾಥ ಮಕ್ಕಳು, ತಮ್ಮವರಿಂದ ದೂರವಾಗಿ ವೃದ್ಧಾಶ್ರಮದಲ್ಲಿರುವ ವೃದ್ಧರು, ಬುದ್ದಿಮಾಂದ್ಯ ಮಕ್ಕಳು ಹಾಗೂ ಅಂಧರೊಂದಿಗೆ ಸೇರಿ ಜನ್ಮ ದಿನ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *

*