ಮೈಸೂರಿನ ದಸರಾ ಬಿಟ್ಟರೆ ಶಿವಮೊಗ್ಗದಲ್ಲಿಯೇ ದಸರಾ ಹಬ್ಬ ಇಡೀ ನಾಡಿನ ಗಮನ ಸೆಳೆಯುತಿತ್ತು. ಆದರೆ ಈ ಬಾರಿಯ ಉಪಚುನಾವಣೆ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ದಸರಾ ಹಬ್ಬಕ್ಕೆ ಮಲೆನಾಡು ಜಿಲ್ಲೆ ಶಿವಮೊಗ್ಗ ತಯಾರಾಗುತ್ತಿದೆ. ಇದಕ್ಕಾಗಿ ಸಕಲ ಸಿದ್ದತೆಗಳು ಭರದಿಂದ ನಡೆಯುತ್ತಿವೆ. ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಜೋರಾಗಿ ನಡೆದಿದ್ದು, ಮಾರುಕಟ್ಟೆಯಲ್ಲಿ ಜನಸಾಗರ ಹೆಚ್ಚಾಗಿದೆ. ನಗರದ ಎಪಿಎಮ್ ಸಿ ಮಾರುಕಟ್ಟೆ, ಗಾಂಧಿ ಬಜಾರ್, ಪ್ರಮುಖ ವೃತ್ತಗಳಲ್ಲಿ ಚೆಂಡು ಹೂ, ಬೂದಗುಂಬಳ, ಹಣ್ಣು , ತರಕಾರಿ, ಬಾಳೆ ದಿಂಡು ಗಳ ಮಾರಾಟ ಬಲು ಜೋರಾಗಿದೆ. ಚೆಂಡು ಹೂ ಹಾಗೂ ಬೂದ ಗುಂಬಳವನ್ನು ಪ್ರತಿಯೊಬ್ಬರೂ ಆಯುಧ ಪೂಜೆಗೆ ಖರೀದಿಸುವುದರಿಂದ ಬೆಲೆ ಕೂಡ ಏರಿಕೆಯಾಗಿದೆ.
ಚೆಂಡು ಹೂ ಕೆಜಿಗೆ ೪೦ ರಿಂದ ೫೦ ರೂ., ಸೇಬು ೧೦೦ ರೂ., ಮೂಸುಂಬೆ ೪೦ ರೂ., ಸೀತಾಫಲ ೬೦ ರೂ., ದ್ರಾಕ್ಷಿ ೮೦ ರೂ., ಸಪೋಟ ೪೦ ರೂ., ದಾಳಿಂಬೆ ೧೦೦ ರೂ., ಸೇವಂತಿಗೆ ಮಾರಿಗೆ ೫೦ ರಿಂದ ೬೦ ರೂ., ಮಲ್ಲಿಗೆ ಮಾರಿಗೆ ೮೦ ರೂ., ಬೂದಗುಂಬಳ ಒಂದಕ್ಕೆ ೫೦ ರೂ. ನಿಂದ ೧೦೦ ವರೆಗೂ ಮಾರಾಟವಾಗುತ್ತಿದೆ.
ಒಂದು ವಾರದಿಂದ ನಗರದ ಎಲ್ಲ ದೇವಾಲಯಗಳಲ್ಲಿ ನವರಾತ್ರಿ ವೈಭವ ನಡೆಯುತ್ತಿದೆ. ೯ ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಪ್ತಶತಿಪರಾಯಣ, ಲಲಿತಾ ಷ್ಟೋತ್ತರ, ಕುಂಕು ಮಾರ್ಚನೆ, ವಿಶೇಷ ಪುಷ್ಪ ಅಲಂ ಕಾರಗಳು, ವಿವಿಧ ಹೋಮಗಳು, ಸುಗಮ ಸಂಗೀತ, ಹೂವಿನ ಪೂಜೆ, ವಿವಿಧ ದೇವಿಯ ಪ್ರತಿಷ್ಠಾನಗಳು ಹೀಗೆ ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ.
ಬೆಲೆಏರಿಕೆ ನಡುವೆಯೂ ಹಬ್ಬದ ಸಡಗರಕ್ಕೇನು ಕೊರತೆಯಾಗಿಲ್ಲ.
Recent Comments