ಬಿಜೆಪಿಯವರು ಸಣ್ಣತನದಿಂದ ಮಾತನಾಡುತ್ತಿದ್ದಾರೆ, ಅದನ್ನು ಅವರು ಮುಂದುವರೆಸಿಕೊಂಡು ಹೋಗಲೀ. ಆ ರೀತಿ ಸಣ್ಣ ಮಟ್ಟದ ಮಾತುಗಳಿಗೆ ನಾನು ಉತ್ತರ ನೀಡುವುದಿಲ್ಲ. ಇನ್ನು ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ…? ನಾವುಗಳು ಕೂಡ ಹಿಂದುಗಳೇ… ಬಿಜೆಪಿಯವರಿಗೆ ಉಳಿದಿರುವುದು ಅದೊಂದೇ, ಅದು ಬಿಟ್ಟರೆ ಅವರ ಬಳಿ ಬೇರೆ ಏನು ಇಲ್ಲ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದರು.ಮೈತ್ರಿ ಸರ್ಕಾರದ ನಡವಳಿಕೆ ಬಗ್ಗೆ ಹಲವಾರು ಟೀಕೆ ಟಿಪ್ಪಣಿಗಳು ಕೇಳಿ ಬಂದಿದೆ. ರಾಷ್ಟ್ರಿಕೃತ ಬ್ಯಾಂಕುಗಳ ಬಗ್ಗೆಯಾಗಲೀ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ನಾನು ಎಲ್ಲಿಯೂ ಮಾತಾಡಿಲ್ಲ. ಸುಮ್ಮನೇ ಮಾಧ್ಯಮದ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪ ಮಾಡಿದ್ದರು. ವಿಷಯವನ್ನಿಟ್ಟುಕೊಂಡು ಚರ್ಚೆ ನಡೆಸೋಣ, ವ್ಯಯಕ್ತಿಕ ಟೀಕೆಗಳನ್ನು ಇಲ್ಲಿ ಮಾಡುವ ಅಗತ್ಯವಿಲ್ಲ ಎಂದು ವಿರೋಧಿಗಳಿಗೆ ಕಿವಿ ಮಾತನ್ನು ಸಹ ಎಚ್ ಡಿ ಕುಮಾರಸ್ವಾಮಿ ಇದೇ ಸಮಯದಲ್ಲಿ ತಿಳಿಸಿದ್ದರು.

Recent Comments