ಬಂಗಾರಪ್ಪನವರ ಕುಟುಂಬಕ್ಕಾದ ನೋವನ್ನು ಸರಿಪಡಿಸುವ ಅವಕಾಶ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರಾದ ನಮಗೆ ದೊರೆತಿದೆ. ಕಾಂಗ್ರೆಸ್ ಜೆಡಿಎಸ್ ನ ಶಾಶ್ವತವಾದ ಮೈತ್ರಿ ಮುಂದುವರೆಯಲು ಈ ಉಪ ಚುನಾವಣೆ ಪ್ರಥಮ ಹೆಜ್ಜೆಯಾಗಿದೆ . ಭೀಷ್ಮನಂತೆ ಇರುವ ಕಾಗೋಡು ತಿಮ್ಮಪ್ಪರ ಆಶೀರ್ವಾದದೊಂದಿಗೆ, ಮಧು ಬಂಗಾರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪನವರನ್ನು ನಿಲ್ಲಿಸಲು ಈ ಮೊದಲು ತೀರ್ಮಾನಿಸಲಾಗಿತ್ತು.. ಅದರೆ ನಂತರ ಕಾಗೋಡು ತಿಮ್ಮಪ್ಪ ಸಲಹೆ ಮೇರೆಗೆ ಮಧು ಬಂಗಾರಪ್ಪನವರ ಹೆಸರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಎಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಇದು ವ್ಯಕ್ತಿಗತ ಚುನಾವಣೆಯಲ್ಲಾ.
ಉಪಚುನಾವಣೆಯ ನಿರೀಕ್ಷೆ ಇರಲಿಲ್ಲ. ಈ ಚುನಾವಣೆ ದೇವರ ಆಟ. ಇದರಲ್ಲಿ ಹುಡುಕಾಟದ ಪ್ರಶ್ನೆ ಇಲ್ಲ. ಪವಿತ್ರ ಮೈತ್ರಿಯೋ ಅಥವಾ ಅಪವಿತ್ರ ಮೈತ್ರಿಯೋ ಎಂಬುದನ್ನು ಈ ಚುನಾವಣೆ ತಿಳಿಸಲಿದೆ ಎಂದು ಎಚ್.ಡಿ.ಕೆ ಟಾಂಗ್ ನೀಡಿದ್ದಾರೆ.
Recent Comments