Cnewstv / 25.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ : ರೌಡಿಶೀಟರ್ ಕಾಲಿಗೆ ಪೊಲೀಸರ ಗುಂಡೇಟು..
ಶಿವಮೊಗ್ಗ : ಇಂದು ಬೆಳ್ಳಗೆ ಶಿವಮೊಗ್ಗ ನಗರದ ಹೊರವಲಯ ಮಲ್ಲಿಗೇನಹಳ್ಳಿ ಹಿಂದೂ ರುದ್ರಭೂಮಿ ಬಳಿ ರೌಡಿಶೀಟರ್ ಪರ್ವೇಜ್ ಅಲಿಯಾಸ್ ಫರ್ರು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ಪ್ರಕರಣವೊಂದರಲ್ಲಿ ಆರೋಪಿ ಪರ್ವೇಜ್ ಬಂಧನಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ತೆರಳಿದ್ದರು, ಈ ವೇಳೆ ಡ್ರಾಗರ್ ನಿಂದ ಪೊಲೀಸ್ ಸಿಬ್ಬಂದಿ ನಾಗಪ್ಪ ಎಂಬುವರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ರೌಡಿಶೀಟರ್ ಗೆ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸತ್ಯನಾರಾಯಣ ಎಚ್ಚರಿಕೆ ನೀಡಿರುವ ಧಿಕ್ಕರಿಸಿದ ಹಿನ್ನೆಲೆ ರೌಡಿಶೀಟರ್ ಪರ್ವೇಜ್ ಕಾಲಿಗೆ ಶಾಟ್ ಫೈರ್ ಮಾಡಿದ್ದಾರೆ.
ಗಾಯಗೊಂಡ ರೌಡಿಶೀಟರ್ ಪರ್ವೇಜ್ ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#Rowdysheetershotfire #Shotfire #Karnatakastategovernment #Shivamogga #Tunganaragastation
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇದನ್ನು ಒದಿ..
Recent Comments