Www.cnewstv.in / 19.03.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೋದಿಯವರ ಶಿವಮೊಗ್ಗ ಭೇಟಿ ‘ರಾಜಕೀಯ ಜಾತ್ರೆ’
ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿಯವರ ಶಿವಮೊಗ್ಗ ಭೇಟಿ ‘ರಾಜಕೀಯ ಜಾತ್ರೆ’ಯೇ ಹೊರತು ಜನರ ಬಗ್ಗೆ ಕಾಳಜಿಯಿಂದಲ್ಲ. ಇದೊಂದು ಪ್ರತಿಷ್ಠತೆಯ ಪ್ರದರ್ಶನವಾಯಿತೇ ಹೊರತು ಮಲೆನಾಡಿನ ಸಮಸ್ಯೆಗಳಿಗೆ ಉತ್ತರವಾಗಲಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿಯವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದೇ ಚುನಾವಣಾ ಪ್ರಚಾರ ಎಂದುಕೊಂಡಿದ್ದಾರೆ. ಅವರು ಬಂದರೂ, ಹೋದರೂ ಅಷ್ಟೇ ಇಲ್ಲಿನ ಯಾವುದೇ ಸಮಸ್ಯೆಗಳಿಗೆ ಉತ್ತರವಾಗಲಿಲ್ಲ. ಕೇಂದ್ರಕ್ಕೆ ಸಂಬಂಧಪಟ್ಟಂತೆ ವಿಐಎಸ್‌ಎಲ್ ಕಾರ್ಖಾನೆಯ ಸಮಸ್ಯೆ ಇತ್ತು, ಶರಾವತಿ ಸಂತ್ರಸ್ಥರ ಸಮಸ್ಯೆ ಇತ್ತು, ಬರಗಾಲವಿತ್ತು, ಅಡಿಕೆ ಬೆಳೆಗಾರರ ಸಮಸ್ಯೆ ಇತ್ತು. ಇದ್ಯಾವುದರ ಬಗ್ಗೆಯೂ ಅವರು ಮಾತನಾಡಲಿಲ್ಲ. ನೀತಿ ಸಂಹಿತೆ ಇದ್ದರೂ ಕೂಡ ಅದಕ್ಕೆ ಪೂರಕವಾಗಿಯೇ ಮಾತನಾಡಬಹುದಿತ್ತು. ಆದರೆ ಹಾಗೆ ಮಾಡದೇ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರೂ ಅಷ್ಟೇ ಎಂದರು.
ಈ ಹಿಂದೆ ಬಿ.ವೈ.ರಾಘವೇಂದ್ರ ವಿಐಎಸ್‌ಎಲ್ ಸಮಸ್ಯೆ ಬಗೆಹರಿಸುವುದಾಗಿ ಮಾತುಕೊಟ್ಟಿದ್ದರು ಅಮಿತ್ ಶಾ ಅವರು ನೀಡಿದ ಪತ್ರವನ್ನು ತೋರಿಸಿದರು. ಇದೆಲ್ಲ ಮೂಗಿಗೆ ತುಪ್ಪ ಹಚ್ಚುವ ಕೆಲಸ ಎಂದು ಅಂದೇ ಗೊತ್ತಿತ್ತು. ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಒಂದೇ ವಾರದಲ್ಲಿ ಬಗೆಹರಿಸುವುದಾಗಿ ಹೇಳಿದ್ದರು. ಆದರು ಬಗೆಹರಿಸಲಿಲ್ಲ. ರಾಜ್ಯ ಭೀಕರ ಬರಗಾಲದಲ್ಲಿದ್ದರು ಪ್ರಧಾನಿಯವರು ರಾಜ್ಯಕ್ಕೆ ನೆರವು ನೀಡುವ ಬಗ್ಗೆ ಮಾತನಾಡಲಿಲ್ಲ. ಹೋಗಲಿ ಕೇಂದ್ರದಿAದ ರಾಜ್ಯಕ್ಕೆ ಬರಬೇಕಾದ ಹಣ ನೀಡುವ ಬಗ್ಗೆಯೂ ಮಾತನಾಡಲಿಲ್ಲ. ಹಾಗಾಗಿ ಇದೊಂದು ರಾಜಕೀಯ ಜಾತ್ರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜಿ.ಪದ್ಮನಾಭ್, ಧೀರರಾಜ್ ಹೊನ್ನಾವಿಲೆ, ಆಯನೂರು ಸಂತೋಷ್ ಇದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ..
Recent Comments