Cnewstv / 27.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಶಾಮನೂರು ಶಿವಶಂಕರಪ್ಪನವರ ಹೇಳಿಕೆಯ ಅಸಮಾಧಾನ ತಂದಿದೆ : ಆರ್ ಪ್ರಸನ್ನ ಕುಮಾರ್
ಶಿವಮೊಗ್ಗ : ಶಾಮನೂರು ಶಿವಶಂಕರಪ್ಪನವರು ಬಿ ವೈ ರಾಘವೇಂದ್ರರವರನ್ನ ಗೆಲ್ಲಿಸಿ ಎಂದು ಹೇಳಿಕೆ ನೀಡಿರುವುದು, ನನಗೆ ಅಸಮಾಧಾನ ತಂದಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಹೇಳಿದ್ದಾರೆ
ಜನರು ಇದನ್ನೆಲ್ಲಾ ನೋಡುತ್ತಿರುತ್ತಾರೆ. ಅವರಿಗೆ ಚುನಾವಣೆ ಸಂದರ್ಭದಲ್ಲಿ ಏನು ಉತ್ತರ ಕೊಡಬೇಕು ಅದನ್ನು ಕೊಡುತ್ತಾರೆ. ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಶಾಸಕರಾಗಿ ಹಾಗೂ ಅವರ ಪುತ್ರ ಸಚಿವರಾಗಿದ್ದು ಈ ರೀತಿಯ ಪಕ್ಷವಿರೋಧಿ ಹೇಳಿಕೆಯನ್ನು ನೀಡಿರುವುದು ನನಗೆ ಅಸಮಾಧಾನ ತಂದಿದೆ.
ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿ ಧಾರ್ಮಿಕ ಕಾರ್ಯಕ್ರಮದ ವಿಚಾರಗಳನ್ನ ಮಾತನಾಡಬೇಕಾಗಿತ್ತು. ಬದಲಾಗಿ ರಾಜಕೀಯದ ವಿಚಾರವನ್ನು ಆ ವೇದಿಕೆಯಲ್ಲಿ ಮಾತನಾಡಿರುವುದು ಅಷ್ಟು ಸಮಂಜಸವಲ್ಲ ಎಂದರು..
#Shivamogga #Byragavendra #Bjp #congress #ShamanuruShivashankarappa #MPElection
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv