Breaking News

Who is he..? ಯಾರು ಯೋಗೇಶ್? ಹೋ… ನಮ್ಮ ಕಾರ್ಪೋರೇಟರ್….

Www.cnewstv.in / 23.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Who is he..? ಯಾರು ಯೋಗೇಶ್?
ಹೋ… ನಮ್ಮ ಕಾರ್ಪೋರೇಟರ್….

ಶಿವಮೊಗ್ಗ : ಈ ಪ್ರಶ್ನೆ ಬೇರೆ ಪಕ್ಷದ ನಾಯಕರಿಂದ ಬಂದಿದ್ದರೆ ಅಚ್ಚರಿ ಪಡುವ ಅಗತ್ಯವಿರಲಿಲ್ಲ. ಆದರೆ, ಕಾಂಗ್ರೆಸ್ ನಾಯಕ ಆಯನೂರು ಮಂಜುನಾಥ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಈ ರೀತಿ ಹೇಳಿದ್ದು ಅಚ್ಚರಿಗೆ ಕಾರಣವಾಗಿದೆ.  

ನೈರುತ್ಯ ಪದವೀಧರರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ನಾನೇ ಎಂದು ಹೇಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಆಯನೂರು ಮಂಜುನಾಥ್ ಈ ರೀತಿ ಹೇಳಿದ್ದಾರೆ.ಇವರ ಹೇಳಿಕೆ, ಜಿಲ್ಲಾ ಕಾಂಗ್ರೆಸ್ ನಲ್ಲಿ ಇರುವ ಭಿನ್ನಮತಕ್ಕೆ ಕನ್ನಡಿ ಹಿಡಿದಿದೆ.

ಬಿಜೆಪಿಗೆ ರಾಜೀನಾಮೆ ನೀಡಿ, ಜೆಡಿಎಸ್ ನಿಂದ ಸ್ಪರ್ಧಿಸಿ, ಠೇವಣಿ ಕಳೆದುಕೊಂಡು ಕಾಂಗ್ರೆಸ್ಗೆ ಬಂದ ಆಯನೂರು ಬಗ್ಗೆ ಯೋಗೇಶ್ ಅಸಮಾಧಾನ ಹೊಂದಿದ್ದರು. ಇವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ಇಂದು ಬಹಿರಂಗವಾಗಿ ಆಯನೂರು ಮಂಜುನಾಥ್ ಅವರು ‘ಹೂ ಇಸ್ ಹಿ’ ಎನ್ನುವ ಮಾತು ಇನ್ನೂ ಕೂಡ ಏನು ಸರಿ ಹೋಗಿಲ್ಲ ಎನ್ನುವುದನ್ನು ಮತ್ತೆ ತೋರಿಸಿದೆ.

ಮಂಜುನಾಥ್ ಅವರ ಪತ್ರಿಕಾಗೋಷ್ಠಿಯಲ್ಲಿ, ಹಿಂಬದಿಯ ಫ್ಲೆಕ್ಸಿನಲ್ಲಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆದಂತಹ ಹೆಚ್ ಸಿ ಯೋಗೇಶ್ ರವರ ಫೋಟೋ ಯಾಕೆ ಇಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಯಾರು ಯೋಗೇಶ್ ?? ಓ ನಮ್ಮ ಕಾರ್ಪೊರೇಟರ್ ಅಲ್ಲವೇ ?? ಬೈ ಮಿಸ್ಟೇಕ್ ಬಿಟ್ಟು ಹೋಗಿರಬೇಕು ಹಾಕಿಸೋಣ ಬಿಡಿ ಎಂದು ಹೇಳಿದರು. ಈ ಮಾತು ಸಾಕಷ್ಟು ರಾಜಕೀಯ ಅರ್ಥಗಳನ್ನು ನೀಡಿತು….

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

SP ದಿನೇಶ್ ರವರಿಗೆ ಕುರುಬಲ ಇರಬಹುದೇ ?? ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾತು ಕೊಡಲು ಸಾಧ್ಯವೇ ??

Leave a Reply

Your email address will not be published. Required fields are marked *

*