Breaking News

SP ದಿನೇಶ್ ರವರಿಗೆ ಕುರುಬಲ ಇರಬಹುದೇ ?? ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾತು ಕೊಡಲು ಸಾಧ್ಯವೇ ??

Www.cnewstv.in / 23.01.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

SP ದಿನೇಶ್ ರವರಿಗೆ ಕುರುಬಲ ಇರಬಹುದೇ ?? ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾತು ಕೊಡಲು ಸಾಧ್ಯವೇ ??

ಶಿವಮೊಗ್ಗ : ಮುಂಬರಲಿರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯ ಕಾವು ಶಿವಮೊಗ್ಗದಲ್ಲಿ ಆರಂಭವಾಗಿದೆ. ಈಗಾಗಲೇ ಆಕಾಂಕ್ಷಿ ಅಭ್ಯರ್ಥಿಗಳಾಗಿರುವ ಎಸ್ ಪಿ ದಿನೇಶ್ ಹಾಗೂ ಆಯನೂರು ಮಂಜುನಾಥ್ ರವರ ಹೆಸರನ್ನು ಕೆಪಿಸಿಸಿಗೆ ಶಿಫಾರಸು ಮಾಡಲಾಗಿದೆ.

ಬಿಜೆಪಿಯಲ್ಲಿ ಮಾತ್ರ ಆಯನೂರು ಮಂಜುನಾಥ್ ರವರಿಗೆ ಗುರು ಬಲ ಎಂದು ಹೇಳಿದ ಎಸ್ ಪಿ ದಿನೇಶ್‍ರವರ ಮಾತಿಗೆ ಪ್ರತಿಕ್ರಿಯಿಸಿದ ಆಯನೂರಯ ಮಂಜುನಾಥ್ ರವರು, ನನಗೆ ಗುರು ಬಲ ಇಲ್ಲ ಎಂಬುದನ್ನ ಅವರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಇಷ್ಟು ದಿನ ಅವರಿಗೆ ಯಾವ ಬಲ ಇರಲಿಲ್ಲ. ಅವರಿಗೆ ಕುರುಬಲ ಇರಬಹುದೇ?? ನನ್ನ ಜ್ಯೋತಿಷ್ಯ ನೋಡುವುದು ಅವರು ಯಾವಾಗ ಕಳಿತುಕೊಂಡಿದ್ದಾರೆ ?? ಅವರು ಅವರ ಭವಿಷ್ಯವನ್ನು ನೋಡಿಕೊಳ್ಳುವುದು ಒಳ್ಳೆಯದು. ಇನ್ನು ಇವರೇ ಎಲೆಕ್ಷನ್ ಏಜೆಂಟ್ ಆಗಿದ್ದಾಗ ಫಲಿತಾಂಶ ಏನು ಬರುತ್ತದೆ ಎಂಬುವುದು ಕಂಡುಕೊಂಡಿದ್ದಾರಲ್ಲ ಎಂದು ಪ್ರಶ್ನಿಸಿದರು.

 

 

ನಾನು MLC ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಯಸುವವನು, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಮಾತುಕೊಡಲು ಸಾಧ್ಯವೇ ?? ನನ್ನ ಸಹವರ್ತಿಯೂ ಯಾರು ಕೂಡ ಅವರ ಹತ್ತಿರ ಹೋಗಿಲ್ಲ.‌ ಪಾಪ ಅನುಕಂಪ ಗಳಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಆತರ ಯಾರು ದಿನೇಶ್ ಅವರ ಹತ್ತಿರ ಕೇಳಿಲ್ಲ. ಕೇಳುವ ಪ್ರಶ್ನೆಯೂ ಇಲ್ಲ ಎಂದರು.

#teacherandgraduateelection #aynurmanjunath #SPDinesh #MLC #Election2024 #Vote #Shivamogga

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

 

Leave a Reply

Your email address will not be published. Required fields are marked *

*