Breaking News

ಕೋವಿಡ್ ನಿಯಂತ್ರಣಕ್ಕಾಗಿ ಆಸ್ಪತ್ರೆ-ಸಿಬ್ಬಂದಿ-ಔಷಧಿಗಳ ಸಿದ್ದತೆ ಇರಲಿ..

Cnewstv / 23.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಕೋವಿಡ್ ನಿಯಂತ್ರಣಕ್ಕಾಗಿ ಆಸ್ಪತ್ರೆ-ಸಿಬ್ಬಂದಿ-ಔಷಧಿಗಳ ಸಿದ್ದತೆ ಇರಲಿ..

ಶಿವಮೊಗ್ಗ : ನೆರೆಯ ರಾಜ್ಯಗಳಲ್ಲಿ ಕೋವಿಡ್ ಉಪತಳಿ ವರದಿಯಾದ ಹಿನ್ನೆಲೆ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ ಹೊಸ ರೂಪಾಂತರಿ ತಳಿಯ ಬಗ್ಗೆ ಜನರಲ್ಲಿ ಹೆಚ್ಚಿನ ಆತಂಕ ಬೇಡ. ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿ ಮತ್ತು ಸಲಹಾತ್ಮಕ ಕ್ರಮಗಳನ್ನು ಪಾಲಿಸಬೇಕು.60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಮಕ್ಕಳು, ಇತರೆ ತೀವ್ರತರ ಖಾಯಿಲೆಯಿಂದ ಬಳಲುವವರು ಹೊರಾಂಗಣ ಪ್ರದೇಶಕ್ಕೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ವಚ್ಚತೆ ಕಡೆ ಗಮನ ಹರಿಸಬೇಕು.

ಎಲ್ಲ ಆಸ್ಪತ್ರೆಗಳಲ್ಲಿ ಬೆಡ್‍ಗಳು, ಆಕ್ಸಿಜನ್ ಬೆಡ್‍ಗಳು, ಐಸಿಯು, ವೆಂಟಿಲೇಟರ್, ಆಕ್ಸಿಜನ್, ಆಂಬುಲೆನ್ಸ್, ಪ್ರಯೋಗಾಲಯ, ಅಗತ್ಯ ಔಷಧಿ ಇತರೆ ಎಲ್ಲ ವ್ಯವಸ್ಥೆ ಸಿದ್ದವಿರುವಂತೆ ನೋಡಿಕೊಳ್ಳಬೇಕು. ಅಗತ್ಯ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಲು ಪ್ರಯೋಗಾಲಯ ಹಾಗೂ ಆರ್‍ಟಿಪಿಸಿಆರ್ ಕಿಟ್‍ಗಳನ್ನು ಸಿದ್ದಪಡಿಸಿಕೊಳ್ಳಬೇಕು. ಪಿಹೆಚ್‍ಸಿ ಯಿಂದ ಹಿಡಿದು ಎಲ್ಲ ಆಸ್ಪತ್ರೆಗಳಲ್ಲಿ ಎಸ್‍ಎಆರ್‍ಐ ಮತ್ತು ಐಎಲ್‍ಐ ಲಕ್ಷಣಗಳುಳ್ಳ ಪ್ರಕರಣಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹೊರ ರಾಜ್ಯ ಮತ್ತು ದೇಶಗಳಿಗೆ ಪ್ರಯಾಣ ಮಾಡುವವರು ಅಲ್ಲಿನ ಪರಿಸ್ಥಿತಿ ಅರಿತು ಪ್ರಯಾಣ ಬೆಳೆಸಬೇಕು.

ತಾಲ್ಲೂಕು ಆಸ್ಪತ್ರೆಗಳಲ್ಲಿ ಬೆಡ್‍ಗಳು, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್, ಆಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್ ಕುರಿತು ಮಾಕ್‍ಡ್ರಿಲ್ ಮಾಡಬೇಕು. ಟಿಹೆಚ್‍ಓಗಳು, ಎಎಂಓ ಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಹಾಗೂ ತಹಶೀಲ್ದಾರರು, ಎಸಿ ಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಕೋವಿಡ್ ಸಿದ್ದತೆಯ ಕುರಿತು ಪರಿಶೀಲಿಸಬೇಕೆಂದರು ಹಾಗೂ ಎಲ್ಲ ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ, ಸ್ಯಾನಿಟೈಸರ್‍ನ್ನು ಇಡಲು ತಿಳಿಸಿ ಅವರು ಅಧಿಕಾರಿಗಳಿಗೆ ಕೋವಿಡ್ 19 ನಿರ್ವಹಣೆ ಕುರಿತು ಸೂಚನೆಗಳನ್ನು ನೀಡಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ 950 ಆಕ್ಸಿಜನ್ ಬೆಡ್‍ಗಳಿವೆ. 100 ಕ್ಕೂ ಹೆಚ್ಚು ಐಸಿಯು ಬೆಡ್, 80 ವೆಂಟಿಲೇಟರ್, 1000 +350 ಲೀಟರ್ ಸಾಮಥ್ರ್ಯದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಇದೆ. ಎಲ್ಲಾ ತಾಲ್ಲೂಕುಗಳಲ್ಲೂ 6 ಕೆಎಲ್ ಸಾಮಥ್ರ್ಯದ ಆಕ್ಸಿಜನ್ ಟ್ಯಾಂಕ್‍ಗಳಿವೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಒಟ್ಟು 1560 ಬೆಡ್‍ಗಳಿದ್ದು, 250 ಐಸಿಯು ಬೆಡ್‍ಗಳು, 140 ವೆಂಟಿಲೇಟರ್ ಬೆಡ್, 40 ವೆಂಟಿಲೇಟರ್, 8 ಬಿಎಲ್‍ಎಸ್ ಆಂಬುಲೆನ್ಸ್, 4 ಎಎಲ್‍ಎಸ್ ಆಂಬುಲೆನ್ಸ್, 611 ಆಕ್ಸಿಜನ್ ಸಿಲಿಂಡರ್, 7 ಪಿಎಸ್‍ಎ ಪ್ಲಾಂಟ್‍ಗಳಿವೆ. ಜಿಲ್ಲೆಯ ನಾಲ್ಕು ಕಡೆ ಮ್ಯಾನಿಫೋಲ್ಡ್ ವ್ಯವಸ್ಥೆ ಇದೆ, ಪ್ರತಿ ತಾಲ್ಲೂಕಿನಲ್ಲಿ 50 ಜಂಬೊ ಸಿಲಿಂಡರ್, ಪ್ರತಿ ಪಿಹೆಚ್‍ಸಿಗಳಲ್ಲಿ 15 ರಿಂದ 20 ಆಕ್ಸಿಜನ್ ಕಾನ್ಸಂಟ್ರೇಟರ್ ಇವೆ. ನುರಿತ ಸಿಬ್ಬಂದಿಗಳು ಇದ್ದು, ಔಷಧಿ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

#Covid19 #corona #shivamogga #DC

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಇದನ್ನು ಒದಿ..

 

Leave a Reply

Your email address will not be published. Required fields are marked *

*

Tags

*ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ* *9916660399* Accident Bangalore Bhadravathi BJP B S yaduvurappa B Y Ragavendra Congress Corona Corona report Corona virus Covid 19 Crime Hosanagara JDS K S Eshwarappa madhu bangarappa M P Election MP election News NSUI police Sagara Shikaripura Shimoga shimoga district Shivammoga Shivamoga Shivamogga Soraba SP shivamogga ಒಮಿಕ್ರಾನ್ ಸೋಂಕಿತರ ಸಂಖ್ಯೆ 578 ಕ್ಕೆ ಏರಿಕೆ. ಕೊರೊನಾ ಕೋಟೆ ಶ್ರೀ ಮಾರಿಕಾಂಬ ಜಾತ್ರೆ : ಇಂದು ಗಾಂಧಿಬಜಾರ್ ನಲ್ಲಿ ಚಪ್ಪರ ಪೂಜೆ.‌ ಚಾರುಲತಾ ಸೋಮಲ್‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 791 ಕೊರೊನಾಗೆ 7 ಜನ ಬಲಿ ಜಿಲ್ಲೆಯಲ್ಲಿ ಎರಡಂಕಿಗೆ ಇಳಿದ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ 38 ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ. ನಾಳೆ ನಗರದಲ್ಲಿ ವಿದ್ಯುತ್ ವ್ಯತ್ಯಯ. ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಗಂದೂರು

Recent Comments