Cnewstv / 22.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್..ಕೆಲ ರೈಲುಗಳಿಗೆ ಹೆಚ್ಚಿನ ಕೋಚ್ ಗಳ ಅಳವಡಿಕೆ..
ಶಿವಮೊಗ್ಗ : ಹೊಸ ವರ್ಷ ಮತ್ತು ಕ್ರಿಸ್ ಮಸ್ ಗೆ ರೈಲ್ವೆ ಇಲಾಖೆ ಕೆಲ ರೈಲುಗಳಿಗೆ ಹೆಚ್ಚಿನ ಕೋಚ್ ಗಳನ್ನ ಅಳವಡಿಸಲು ತೀರ್ಮಾನಿಸಿದೆ. ಅದರಂತೆ 19 ರೈಲುಗಳಿಗೆ ಹೆಚ್ಚಿನ ಕೋಚ್ ಅಳವಡಿಸಲಾಗುತ್ತಿದೆ. ಮೈಸೂರು ವಿಭಾಗದ ವತಿಯಿಂದ ಓಡಾಡುವ 19 ರೈಲುಗಳಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಬೋಗಿಗಳ ಸಂಖ್ಯೆಯನ್ನ ಹೆಚ್ಚಿಸಲಾಗಿದೆ.
ಬೆಂಗಳೂರು-ಮೀರಜ್, ಬೆಂಗಳೂರು-ಬೆಳಗಾವಿ, ಹುಬ್ಬಳ್ಳಿ ಬೆಂಗಳೂರು, ಬೆಂಗಳೂರು ಹೊಸಪೇಟೆ, ಹೊಸಪೇಟೆ-ಹರಿಹರ-ಹೊಸಪೇಟೆ, ವಾಸ್ಕೋಡಗಾಮ-ಯಶವಂತಪುರ, ಯಶವಂತಪುರ-ಕಾರಟಗಿ-ಯಶವಂತಪುರ
ಮೈಸೂರು-ಬೆಳಗಾವಿ, ಮೈಸೂರು-ಬಾಗಲಕೋಟೆ, ಬೆಂಗಳೂರು, ಸರ್ ಎಂ ವಿಶ್ವೇಶ್ವರ ಟರ್ಮಿನಲ್- ಮುರುಡೇಶ್ವರ-ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು-ಕನ್ಯಾಕುಮಾರಿ-ಬೆಂಗಳೂರು, ಹುಬ್ಬಳ್ಳಿ ಕುಚ್ಚವೇಲಿ, ಬೆಂಗಳೂರು-ಹುಬ್ಬಳ್ಳಿ, ಯಶವಂತಪುರ-ಕುಚವೇಲಿ ರೈಲುಗಳಿಗೆ ಎಸಿ, ಸೆಕೆಂಡ್ ಕ್ಲಾಸ್, ಚೇರ್ ಕಾರ್, ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, ಎಸಿ3 ಟೈರ್ ಎಕನಾಮಿ ಬೋಗಿಗಳನ್ನ ಜೋಡಿಸಲಾಗುತ್ತಿದೆ.
ಅದರಂತೆ ಶಿವಮೊಗ್ಗದಿಂದ ಚಲಿಸುವ 16227/16228 ಮೈಸೂರು-ತಾಳಗುಪ್ಪ-ತಾಳಗುಪ್ಪ ರೈಲುಗಳಿಗೆ ಡಿ.22 ರಿಂದ ಜನವರಿ 2 ರವರೆಗೆ ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, 16205/16206 ಮೈಸೂರು-ತಾಳಗುಪ್ಪ-ಮೈಸೂರು ರೈಲಿಗೆ ಡಿ. 22 ರಿಂದ ಒಂದು ಚೇರ್‌ಕಾರ್
12089/12090 ಕೆಎಸ್ ಆರ್ ಬೆಂಗಳೂರು-ಶಿವಮೊಗ್ಗ ಟೌನ್-ಕೆಎಸ್ಆರ್ ಬೆಂಗಳೂರು ರೈಲಿಗೆ ಬೆಂಗಳೂರಿನಿಂದ ಡಿ.21 ರಿಂದ ಡಿ.31 ರ ವರೆಗೆ ಮತ್ತು ಶಿವಮೊಗ್ಗದಿಂದ ಡಿ. 22 ರಿಂದ ಜನವರಿ 1 ರ ವರೆಗೆ ಓಡಾಡುವ ರೈಲಿಗೆ ಒಂದು ಚೇರ್ ಕೋಚ್ ಅಳವಡಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.
#train #Shivamogganewtrain #extratrain #Newyear #Xmas
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments