Cnewstv / 22.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮೆಸ್ಕಾಂ AEE ರಮೇಶ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ..
ಶಿವಮೊಗ್ಗ : ಡಿ 21ರಂದು ಆನವಟ್ಟಿ ಮೆಸ್ಕಾಂ ಏಇಇ ಜಿ. ರಮೇಶ್ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆನವಟ್ಟಿ ಮೆಸ್ಕಾಂ ಕಛೇರಿಗೆ ಹೋಗಿ ಎ.ಇ.ಇ. ಜಿ. ರಮೇಶ್ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಎಲೆಕ್ಟ್ರಿಕ್ ಕಂಟ್ರಾಕ್ಟರ್ ಪ್ರದೀಪ್ ಜಿ. ಎಂಬುವವರಿಂದ 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರ ಕೈಗೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಪೊಲೀಸರರು ಬಂಧಿಸಿರುತ್ತಾರೆ.
ಪ್ರದೀಪ್ ಜಿ, ಬಿನ್. ಗುಡ್ಡಪ್ಪ, ಎಲೆಕ್ನಿಕ್ ಕಂಟ್ರಾಕ್ಟರ್, ಬೆಟ್ಟದಕೊರ್ಲಿ ಗ್ರಾಮ, ಕುಪ್ಪಗಡ್ಡೆ ಮೋಸ್ಟ್, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ಕಳೆದ 6 ವರ್ಷಗಳಿಂದ ಕೆಇಬಿ ಇಲಾಖೆಯಲ್ಲಿ ಕ್ಲಾಸ್-! ಎಲೆಕ್ನಿಕಲ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರು ಸೊರಬ ತಾಲ್ಲೂಕು ಕೃಷಿ ಪಂಪ್‍ಸೆಟ್ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ವರ್ಕ್ ಆರ್ಡರ್ ಆಗಿದ್ದು, ಈ ಎಲ್ಲಾ ಕಾಮಗಾರಿಗಳ ಲೈನ್ ವರ್ಕ್ ಮುಕ್ತಾಯಗೊಂಡಿದೆ. ಅವುಗಳಿಗೆ 25 ಕೆ.ವಿ.ಎ. ಟಿಸಿಗಳನ್ನು ಅಳವಡಿಸುವ ಕೆಲಸ ಬಾಕಿಯಿದ್ದುದರಿಂದ ಆ ಬಗ್ಗೆ ಫಿರ್ಯಾದುದಾರರು ಒಟ್ಟು 07 ಟಿ.ಸಿ.ಗಳನ್ನು ಕೊಡಲು ಕೇಳಿದಾಗ ಎ.ಇ.ಇ. ರಮೇಶ್ ರೂ.20 ಸಾವಿರ ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರಿಂದ ಅವರಿಗೆ ಲಂಚದ ಹಣ ಕೊಡಲು ಇಷ್ಟವಿರದ ಪ್ರದೀಪ್ ಜಿ., ಇವರು ಶಿವಮೊಗ್ಗ ಲೋಕಾಯುಕ್ತ ಕಛೇರಿಗೆ ದೂರು ಕೊಟ್ಟ ಮೇರೆಗೆ ಕ.ಲೋ., ದಲಿ ಪ್ರಕರಣ ದಾಖಲಾಗಿರುತ್ತದೆ.
ಅದರಂತೆ ಇಂದು ದಿ:21-12-2023ರಂದು ಜಿ. ರಮೇಶ್, ಎ.ಇ.ಇ., ಮೆಸ್ಕಾಂ, ಆನವಟ್ಟಿ, ಸೊರಬ ತಾಲ್ಲೂಕು,ಶಿವಮೊಗ್ಗ ಜಿಲ್ಲೆ ಇವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಕಛೇರಿಯಲ್ಲಿ ಫಿರ್ಯಾದಿಯಿಂದ ರೂ.20,000/-ಗಳ ಲಂಚದಹಣವನ್ನು ಪಡೆಯುವಾಗ ನಮ್ಮ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ. ಆರೋಪಿ ಜಿ. ರಮೇಶ್, ಎ.ಇ.ಇ. ಇವರನ್ನು ಬಂಧಿಸಿದ್ದು, ಇವರಿಂದ ಸದರಿ ಪ್ರಕರಣಕ್ಕೆ ಸಂಬಂಧಿಸಿದ ರೂ.20,000/-ಗಳ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್.ಎಸ್.ಸುರೇಶ್, ಪಿಐ-1, ಕ.ಲೋ., ಶಿವಮೊಗ್ಗರವರು ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಆಪಾದಿತ ಜಿ. ರಮೇಶ್, ಎ.ಇ.ಇ., ಮೆಸ್ಕಾಂ, ಆನವಟ್ಟಿ, ಸೊರಬ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರನ್ನು ತನಿಖಾಧಿಕಾರಿಗಳಾದ ಹೆಚ್.ಎಸ್. ಸುರೇಶ್, ಪಿಐ, ಇವರು ದಸ್ತಗಿರಿ ಮಾಡಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಎನ್. ವಾಸುದೇವರಾಮ, ಪೆÇಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿದ್ದು, ಪೆÇಲೀಸ್ ಉಪಾಧೀಕ್ಷಕರಾದ ಉಮೇಶ ಈಶ್ವರ ನಾಯ್ಕ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿರುತ್ತದೆ.
ಈ ಕಾರ್ಯಾಚರಣೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೆÇಲೀಸ್ ಸಿಬ್ಬಂದಿಗಳಾದ ಮಹಂತೇಶ, ಸಿ.ಹೆಚ್.ಸಿ., ಸುರೇಂದ್ರ, ಸಿ.ಹೆಚ್.ಸಿ., ಬಿ.ಟಿ. ಚನ್ನೇಶ, ಸಿಪಿಸಿ, ಪ್ರಶಾಂತ್‍ಕುಮಾರ್, ಸಿಪಿಸಿ, ಅರುಣ್‍ಕುಮಾರ್, ಸಿಪಿಸಿ, ದೇವರಾಜ, ಸಿ.ಪಿ.ಸಿ., ರಘುನಾಯ್ಕ, ಸಿ.ಪಿ.ಸಿ., ಶ್ರೀಮತಿ ಪುಟ್ಟಮ್ಮ, ಮಪಿಸಿ, ಕೆ.ಸಿ. ಜಯಂತ, ಎಪಿಸಿ, ಗಂಗಾಧರ, ಎಪಿಸಿ, ವಿ. ಗೋಪಿ, ಎಪಿಸಿ ಮತ್ತು ಪ್ರದೀಪ್ ಕುಮಾರ್, ಎಪಿಸಿ, ಇವರುಗಳು ಕರ್ತವ್ಯ ನಿರ್ವಹಿಸುತ್ತಾರೆ.
#AEE #Lokayukta #ಲೋಕಾಯುಕ್ತ #soraba #shivamogga #mescom
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇದನ್ನು ಒದಿ
ಒಂದೇ ಲಕ್ಷಕ್ಕೆ ಬಡವರಿಗೆ ಮನೆ, ಇದು ಕಾಂಗ್ರೆಸ್‌ನ 6ನೇ ಗ್ಯಾರಂಟಿ ಎಂದ ಜಮೀರ್..
Recent Comments