Cnewstv / 12.12.2023/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರಾಜ ಭವನಕ್ಕೆ ಬಾಂಬ್ ಬೆದರಿಕೆ ಕರೆ…
ಬೆಂಗಳೂರು : ರಾಜ ಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದು, ಕೆಲಕಾಲ ಅಂತರವನ್ನು ಸೃಷ್ಟಿ ಮಾಡಿತ್ತು.
ಸೋಮವಾರ (ಡಿ.11)ರ ರಾತ್ರಿ 11.30ಕ್ಕೆ ಬೆದರಿಕೆ ಕರೆ ಬಂದಿದ್ದು, ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದಾಗ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 30 ನಿಮಿಷಕ್ಕೂ ಅಧಿಕ ಸಮಯ ತಪಾಸಣೆ ನಡೆಸಿದ ಬಳಿಕ ಇದೊಂದು ಸುಳ್ಳು ಕರೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ರಾತ್ರಿಯೇ ಹಿರಿಯ ಅಧಿಕಾರಿಗಳು ರಾಜಭವನ ಬಳಿ ಬಂದು ಪರಿಶೀಲನೆ ನಡೆಸಿ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ಕಾಲ್ ಮಾಡಿದ ಮೊಬೈಲ್ ನಂಬರ್ ಜಾಡು ಹಿಡಿದಿರುವ ಕೇಂದ್ರ ವಿಭಾಗ ಹಾಗೂ ಸೈಬರ್ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಇದೇ ರೀತಿ 12 ದಿವಸದ ಹಿಂದೆ ಡಿಸೆಂಬರ್ 1 ರಂದು ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದು ಶಾಲಾ ಆಡಳಿತ ಮಂಡಳಿಗೆ ಶಾಕ್ ನೀಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಂಡ ಸ್ಥಳಕ್ಕೆ ದೌಡಾಯಿಸಿದ್ದರು. ಎಲ್ಲ ಶಾಲೆಗಳನ್ನು ಪರಿಶೀಲಿಸಿದ್ದರು. ಆಗ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿಯಿತು. ಇನ್ನು ವಿಷಯಗೊತ್ತಾಗುತ್ತಿದ್ದಂತೆ ಶಾಲೆಗಳಿಗೆ ತೆರಳಿದ ಪೋಷಕರು ಮಕ್ಕಳನ್ನು ಮನೆಗಳಿಗೆ ಕರೆದುಕೊಂಡು ಬಂದಿದ್ದರು. ಅಂದು ಒಂದು ಶಾಲೆಗಳಿಗೆ ರಜೆ ನೀಡಲಾಗಿತ್ತು.
#Hoaxbombthreatcall #Rajbhavan #Bomb threat call #Bangalore #Bombinschools #Vidanasoudha
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments