Cnewstv / 09.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರನಿಗೆ ಯಾವ ಅನುಭವವು ಇಲ್ಲ. ಕೇವಲ ಯಡಿಯೂರಪ್ಪನ ಮಗ ಎಂಬ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
ಶಿವಮೊಗ್ಗ : ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರನಿಗೆ ಯಾವ ಅನುಭವವು ಇಲ್ಲ. ಕೇವಲ ಯಡಿಯೂರಪ್ಪನ ಮಗ ಎಂಬ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ. ವಿರೋಧ ಪಕ್ಷವಾಗಿ ಸಮರ್ಥವಾಗಿ ಸದನದಲ್ಲಿ ಕೆಲಸ ನಿರ್ವಹಿಸಲು ಬಿಜೆಪಿ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.
ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ, ಬರಗಾಲ ಬಂದಿದೆ, ರೈತರು ಸಂಕಷ್ಠದಲ್ಲಿದ್ದಾರೆ, ಕುಡಿಯುವ ನೀರಿಗೆ ತೊಂದರೆ ಇದೆ ಹೀಗೆ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ಮಾಡುವುದು ಬಿಟ್ಟು ಬೇಡವಾದ ವಿಚಾರವನ್ನು ಎತ್ತಿಕೊಂಡು ಸದನದ ಸಮಯವನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರನಿಗೆ ಯಾವ ಅನುಭವವು ಇಲ್ಲ. ಕೇವಲ ಯಡಿಯೂರಪ್ಪನ ಮಗ ಎಂಬ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.
ಸದನದಲ್ಲಿ ಏನು ಮಾತಾನಾಡಬೇಕು, ಹೇಗೆ ಮಾತನಾಡಬೇಕು ಎಂಬುವುದು ಗೊತ್ತಿಲ್ಲ. ಹಾಗೆಯೇ ಅಶೋಕ್‌ರವರಿಗೂ ಸಹ ಪ್ರಸ್ತುತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದನ್ನೇ ಮರೆತಿದ್ದಾರೆ. ಅವರ ಪಕ್ಷದ ಶಾಸಕರೇ ಅವರಿಗೆ ಸಹಮತ ನೀಡಲಿಲ್ಲ. ಅವರ ಪಕ್ಷದಲ್ಲಿಯೇ ನಾಲ್ಕು ಗುಂಪುಗಳಾಗಿ ಬಿಟ್ಟಿದೆ. ಯತ್ನಾಳ್ ಒಂದು ಕಡೆ, ಈ ಇಬ್ಬರು ಒಂದು ಕಡೆ ಆಗಿದ್ದಾರೆ. ವಿಜಯೇಂದ್ರ ಮತ್ತು ಅಶೋಕ್ ಒಂಟಿಯಾಗಿಯೇ ಕಂಡರು ಎಂದರು.
ಯತ್ನಾಳ್ ಒಬ್ಬ ಹಿರಿಯ ರಾಜಕಾರಣಿ ಅಪಪ್ರಚಾರ ಮಾಡಲು ಸಮಯ ತೆಗೆದುಕೊಂಡರು, ತನ್ವೀರ್ ಫೀರಾ ಅವರೊಂದಿಗೆ ಕಾಂಗ್ರೆಸ್ ಮುಖಂಡರ ಸಂಬAಧವಿದೆ ಎಂದರು. ಆದರೆ ಅವರ ತಂದೆಯವರೇ ತನ್ವಿರ್ ಜೊತೆ ವ್ಯವಹಾರ ಮಾಡಿದ್ದಾರೆ. ಅವರ ಜೊತೆ ಬಿಜೆಪಿ ರಾಷ್ಟç ನಾಯಕರು ಪೋಟೋ ತೆಗೆಸಿಕೊಂಡಿದ್ದಾರೆ. ಅವರ ಮೇಲೆ ಅವರೇ ಚಪ್ಪಡಿ ಎಳೆದುಕೊಂಡಿದ್ದಾರೆ. ಬೇಡವಾದ ವಿಷಯದ ಬಗ್ಗೆ ಅಪಪ್ರಚಾರ ಮಾಡಲು ಹೋದರೆ ಇದೇ ಗತಿ ಎಂದು ಕಟುಕಿದರು.
#BYVijendra #HSSundresh #congress #BJP #Shivamoggalive #ಬಿಜೆಪಿರಾಜ್ಯಾಧ್ಯಕ್ಷ #ಯತ್ನಾಳ್ #ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments