Cnewstv / 08.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್ ಸಿಂಗ್ ಇಂದು ಅಧಿಕಾರ ಸ್ವೀಕಾರ..
ಶಿವಮೊಗ್ಗ: ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್ ಸಿಂಗ್ ಇಂದು ಅಧಿಕಾರ ಸ್ವೀಕರಿಸಿದರು.
ದೀಪಕ್ ಸಿಂಗ್ ನಗರ ಅಧ್ಯಕ್ಷರಾಗಿರುವುದು ಅತ್ಯಂತ ಸ್ವಾಗತಾರ್ಹವಾಗಿದೆ. ಅವರ ನೇತೃತ್ವದಲ್ಲಿ ಜನರ ಸಮಸ್ಯೆಗಳನ್ನು ಅರಿತುಕೊಂಡು ಅವರ ಪರವಾಗಿ ಧ್ವನಿ ಎತ್ತುತ್ತೇವೆ. ಜೆಡಿಎಸ್ ಪಕ್ಷವೇ ಬಡವರ ಉದ್ಧಾರ ಮಾಡುವ ಪಕ್ಷವಾಗಿದೆ. ಶಿವಮೊಗ್ಗದಲ್ಲಿ ಮತ್ತಷ್ಟು ಸಂಘಟನೆ ಮಾಡಿ ಪಕ್ಷ ಗಟ್ಟಿಗೊಳಿಸುತ್ತೇವೆ ಎಂದರು.
ಕೆ.ಬಿ. ಪ್ರಸನ್ನಕುಮಾರ್, ಮಾಜಿ ಶಾಸಕ, ಜೆಡಿಎಸ್ ಕೋರ್ ಕಮಿಟಿ ಸದಸ್ಯ.
ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು. ನಗರದ ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ನ್ಯಾಯ ಒದಗಿಸಿಕೊಡಲಾಗುವುದು. ಪ್ರತಿಪಕ್ಷವಾಗಿ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಹೋರಾಟ ನಡೆಸಲಾಗುವುದು. ಪಕ್ಷದ ವರಿಷ್ಠರು ಜವಾಬ್ದಾರಿ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ದೀಪಕ್ ಸಿಂಗ್, ಜೆಡಿಎಸ್ ನಗರಾಧ್ಯಕ್ಷ.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್, ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಜನರ ಕಲ್ಯಾಣವನ್ನೇ ಮರೆತಿದೆ. ಗ್ಯಾರಂಟಿ ಯೋಜನೆಗಳೆಲ್ಲ ವಿಫಲವಾಗಿವೆ. ಅಧಿಕಾರಿಗಳು ಕೂಡ ಕೆಲಸ ಮಾಡುತ್ತಿಲ್ಲ. ಶಿವಮೊಗ್ಗದಲ್ಲಿ ಬಡವರಿಗೆ ಒಂದು ಮನೆಯೂ ನಿರ್ಮಣವಾಗಿಲ್ಲ. ಆಶ್ರಯ ಮನೆಗಾಗಿ ಹಣ ಕಟ್ಟಿ ಕಾಯುತ್ತಿರುವವರು ಸಂಕಟ ಅನುಭವಿಸುತ್ತಿದ್ದಾರೆ ಎಂದರು.
ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ, ಆದರೆ, ಭಯೋತ್ಪಾದಕರಿಗೆ ಶಿಕ್ಷೆ ಕೊಡಿಸಬೇಕಾದುದು ಸರ್ಕಾರದ ಕೆಲಸವಾಗಿದೆ. ಸರ್ಕಾರ ತಿದ್ದುವ ಕೆಲಸ ವಿರೋಧ ಪಕ್ಷಗಳದ್ದು. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಶಿವಮೊಗ್ಗಕ್ಕೆ ಸಂಬAಧಿಸಿದAತೆ ಅಧಿಕಾರಿಗಳನ್ನು ಮಾತನಾಡಿಸುವಂತೆಯೇ ಇಲ್ಲ. ಯಾವ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿಲ್ಲ.
ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಕೆ.ಎನ್. ರಾಮಕೃಷ್ಣ, ಗೋವಿಂದಪ್ಪ, ಬೊಮ್ಮನಕಟ್ಟೆ ಮಂಜುನಾಥ್, ಸಿದ್ದಪ್ಪ, ಗೀತಾ ಸತೀಶ್, ಎಸ್.ವಿ. ರಾಜಮ್ಮ, ಪುಷ್ಪಾ, ನಾಗೇಶ್, ರೇಷ್ಮಾ, ಅಬ್ದುಲ್ ವಾಜಿದ್, ಹೆಚ್.ಎನ್. ಸಂಗಯ್ಯ, ಉಷಾ ನಾಯಕ್, ಆಯನೂರು ಶಿವಾನಾಯ್ಕ್, ರಮೇಶ್ ನಾಯಕ್, ಶಾಮು ಇ£್ನತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments