Cnewstv / 08.12.2023/ ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಲಘು ಭೂಕಂಪ.
ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿ ಇಂದು ಬೆಳಗ್ಗೆ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಚೆಂಗಲ್‌ಪುಟ್ಟನಲ್ಲಿ ಬೆಳಗ್ಗೆ 7.39ಕ್ಕೆ ಸಂಭವಿಸಿರುವ ಭೂಕಂಪನದ ಆಳ 10 ಕಿಲೋ ಮೀಟರ್ ಆಗಿದ್ದು, ಲ್ಯಾಟಿಟ್ಯೂಡ್ 12.50 ಮತ್ತು ಉದ್ದ 79.58 ಇದೆ ಎಂದು ಹೇಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಎನ್‌ಸಿಎಸ್ ಮಾಹಿತಿ ಹಂಚಿಕೊಂಡಿದೆ.
ಕಳೆದ ನಾಲ್ಕೈದು ದಿನಗಳಿಂದ ಚೆನ್ನೈ, ಚೆಂಗಲ್‌ಪಟ್ಟು ಸೇರಿದಂತೆ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸೈಕ್ಲೋನ್ ಮಿಚಾಂಗ್ ಅಬ್ಬರಿಸಿತ್ತು. ಬಿರುಗಾಳಿ ಸಹಿತಿ ಭಾರಿ ಮಳೆಯ ಪರಿಣಾಮ ಚೆನ್ನೈನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ, ಚೆಂಗಲ್‌ಪಟ್ಟು ಸೇರಿ ಕೆಲ ಜಿಲ್ಲೆಗಳಲ್ಲಿ ಭಕ್ತ ಸೇರಿ ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿತ್ತು. ಚಂಡಮಾರುತ ಹೊಡೆತದಿಂದ ಇನ್ನೇನು ಹೊರಬಂದೆವು ಎನ್ನುವಷ್ಟರಲ್ಲಿ ಇದೀಗ ಭೂಕಂಪನವಾಗಿರುವುದು ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರವು ಇಂದು ಬಿಡುಗಡೆ ಮಾಡಿದ ದೈನಂದಿನ ಹವಾಮಾನ ಬುಲೆಟಿನ್ ಪ್ರಕಾರ, ಚೆಂಗಲ್ಪಟ್ಟು ಜೊತೆಗೆ ಚೆನ್ನೈ , ತಿರುವಳ್ಳೂರ್ ಮತ್ತು ಕಾಂಚೀಪುರಂನಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ.
#TamilnaduEarthquake #ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ #NCM #Earthquake of magnitude #ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ಲಘು ಭೂಕಂಪ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments