Cnewstv / 06.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಏಕಾಏಕಿ ಕಾರ್ಮಿಕರು, ರೈತರನ್ನು ಒಕ್ಕಲೆಬ್ಬಿಸಲು ಹೊರಟಿರುವುದು ಖಂಡನೀಯ… ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ರೈತರ ಪ್ರತಿಭಟನೆ..
ಶಿವಮೊಗ್ಗ : ಶಿವಮೊಗ್ಗ ಸಕ್ಕರೆ ಕಾರ್ಖಾನೆಯ ಸರ್ವೆ ನಂ. ೩೩/೧೮೬ರಲ್ಲಿರುವ ಮನೆಗಳಿಗೆ ಮತ್ತು ಕಾಲೋನಿ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಇಂದು ಶಿವಮೊಗ್ಗ ತಾಲ್ಲೂಕು ಸಕ್ಕರೆ ಕಾರ್ಖಾನೆ ರೈತರ ಮತ್ತು ಕಾರ್ಮಿಕರ ಹಕ್ಕು ಹೋರಾಟ ಸಮಿತಿ ಇಂದು ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಮನವಿ ಸಲ್ಲಿಸಿದರು.
ಶಿವಮೊಗ್ಗ ತಾಲ್ಲೂಕು ಮಲವಗೊಪ್ಪ ಗ್ರಾಮದಲ್ಲಿ 1955 ರಲ್ಲಿಯೇ ತುಂಗಾಭದ್ರಾ ಶುಗರ್ ವರ್ಕ್ಸ್ ಎಂಬ ಕಂಪನಿಯವರು ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದ್ದರು.
ಸರ್ಕಾರ ಈ ಸಂದರ್ಭದಲ್ಲಿ ೩೬೮೫ಎಕರೆ ಭೂಮಿಯನ್ನು ನೀಡಿತ್ತು ಇದರಿಂದ ರೈತರು ಮತ್ತು ಕಾರ್ಮಿಕರು ಕಾರ್ಖಾನೆಯನ್ನು ಅವಲಂಭಿಸಿ ಜೀವನ ನಡೆಸುತ್ತಿದ್ದರು. ನಂತರ ಬದಲಾದ ಪರಿಸ್ಥಿತಿಯಲ್ಲಿ ೧೯೯೪ರಲ್ಲಿ ದೇವಿ ಶುಗರ್‌ವರ್ಕ್ಸ್ ಸಂಸ್ಥೆಗೆ ಇದು ಹಸ್ತಾಂತರವಾಯಿತು. ಆದರೆ ಅದು ಕೂಡ ಮುಚ್ಚಿಹೋಯಿತು. ಸರ್ವೆ ನಂ. ೩೩/೧೮೬ರಲ್ಲಿ ೧೮ ಎಕರೆ ಧನಗಳ ಮುಪತ್ತು ಇದ್ದು, ಇದರಲ್ಲಿ ೪೦-೫೦ ವರ್ಷಗಳಿಂದ ಗ್ರಾಮ ಪಂಚಾಯಿತಿಯಿAದ ಖಾತೆ ಪಡೆದು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದರು.
ಆದರೆ ಈಗ ತುಂಗಾಭದ್ರಾ ಶುಗರ್ ವರ್ಕ್ಸ್ ಕಂಪನಿಯವರು ಏಕಾಏಕಿ ಜಮೀನು ಮತ್ತು ಮನೆಗಳನ್ನು ವಶಪಡಿಸಿಕೊಂಡು ಕಾರ್ಮಿಕ ಮತ್ತು ರೈತ ಕುಟುಂಬಗಳನ್ನು ವಕ್ಕಲೆಬ್ಬಿಸಲು ಹೊರಟಿದ್ದಾರೆ. ಎಲ್ಲಾ ಆಸ್ತಿಗಳು ನಮ್ಮದೇ ಎಂದು ಹೇಳುತ್ತಿದ್ದಾರೆ. ಆದರೆ ಕೇವಲ ೫೦ ಎಕರೆ ಜಮೀನು ಮಾತ್ರ ಕಾರ್ಖಾನೆ ಆಡಳಿತ ಮಂಡಳಿಗೆ ಸೇರಿರುತ್ತದೆ ಎಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ತಿಳಿಸಿರುತ್ತದೆ. ಮತ್ತು ಹೈಕೋರ್ಟ್ನಲ್ಲಿ ಈ ಕೇಸ್ ವಿಚಾರಣೆಯ ಹಂತದಲ್ಲಿದೆಯೇ ಹೊರತು ಯಾವುದೇ ಆದೇಶವಾಗಿರುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.
ಆದ್ದರಿಂದ ಕಂಪನಿಯ ಆಸ್ತಿ ಎಲ್ಲವೂ ಸರ್ಕಾರಿ ಜಾಗವೇ ಆಗಿದೆ. ೪೦-೫೦ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ರೈತರು ಕಾರ್ಮಿಕರು ಜಮೀನುಗಳಿಗೆ ಖಾತೆ ಪಹಣಿ ಮಾಡಿಸಿಕೊಂಡಿರುವುದರಿAದ ಇನ್ನುಳಿದ ಜಮೀನುಗಳಿಗೆ ಅಂದರೆ ಸರ್ವೆ ನಂ. ೩೩/೧೮೬ರಲ್ಲಿರುವ ಮನೆಗಳಿಗೆ ಮತ್ತು ಕಾಲೋನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ, ಪದಾಧಿಕಾರಿಗಳಾದ ಕುಮಾರ್, ಮಹಾದೇವ್, ಕೃಷ್ಣಮೂರ್ತಿ, ದೇವರಾಜ್, ಲಿಂಗರಾಜ್, ಹೆಚ್.ಸಿ.ಯೋಗೀಶ್, ಶಿವಕುಮಾರ್, ಕೆ. ದೇವೇಂದ್ರಪ್ಪ, ವಿಶ್ವನಾಥ್ ಕಾಶಿ, ಸುವರ್ಣ ನಾಗರಾಜ್ ಸೇರಿದಂತೆ ನೂರಾರು ರೈತರು ಮತ್ತು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
#Sugar factory Shivamogga #Shivamogga #ಸರ್ವೆ ನಂ. #Farmers #FactoryEmployees..
Recent Comments