Cnewstv / 06.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜೆಡಿಎಸ್ ನಗರಾಧ್ಯಕ್ಷರಾಗಿ ದೀಪಕ್‌ಸಿಂಗ್.. ಡಿ. 8 ರಂದು ಪದಗ್ರಹಣ ಸಮಾರಂಭ..
ಶಿವಮೊಗ್ಗ : ಜೆಡಿಎಸ್ ನಗರಾಧ್ಯಕ್ಷರಾಗಿ ನೇಮಕಗೊಂಡಿರುವ ದೀಪಕ್‌ಸಿಂಗ್‌ರವರ ಪದಗ್ರಹಣ ಸಮಾರಂಭ ಡಿ.8 ರಂದು ಜೆಡಿಎಸ್ ಕಚೇರಿಯ ಆವರಣದಲ್ಲಿ ನಡೆಯಲಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ದೀಪಕ್‌ಸಿಂಗ್ ಅಂದು ಬೆಳಿಗ್ಗೆ 11ಗಂಟೆಗೆ ವಿನೋಬನಗರದಿಂದ ಜೆಡಿಎಸ್ ಕಚೇರಿಯವರೆಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. ನಂತರ 12 ಗಂಟೆಗೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಜೆಡಿಎಸ್‌ನ ರಾಜ್ಯ ಸಂಚಾಲಕ ಹಾಗೂ ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ಶಾಸಕಿ ಶಾರದಪರ‍್ಯಾನಾಯಕ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಕಡಿದಾಳ್‌ಗೋಪಾಲ್ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸುವರು ಎಂದರು.
ಜೆಡಿಎಸ್ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಪಕ್ಷವಾಗಿದೆ. ನಗರಾಧ್ಯಕ್ಷನಾಗಿ ಆಯ್ಕೆ ಮಾಡಿದ್ದಕ್ಕೆ ಜಿಲ್ಲೆ ಮತ್ತು ರಾಜ್ಯದ ಮುಖಂಡರಿಗೆ ನನ್ನ ಕೃತಜ್ಞತೆಗಳು ಬೂತ್‌ಮಟ್ಟದಿಂದ ಜೆಡಿಎಸ್ ಪಕ್ಷವನ್ನು ಸಂಘಟಿಸುತ್ತೇನೆ. ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ಮುಂಬರಲಿರುವ ಮಹಾನಗರಪಾಲಿಕೆ ಚುನಾವಣೆಯಲ್ಲಿ ಎಲ್ಲಾ ವಾರ್ಡ್ಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಆಕಸ್ಮಾತ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೇ ಆ ಸಂದರ್ಭದಲ್ಲಿ ಮುಖಂಡರು ಹೇಗೆ ತೀರ್ಮಾನಿಸುತ್ತಾರೋ ಹಾಗೆ ಆಗುತ್ತದೆ.
– ದೀಪಕ್‌ಸಿಂಗ್.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮಕೃಷ್ಣ, ಬೊಮ್ಮನಕಟ್ಟೆ ಮಂಜು, ಗಂಧದ ಮನೆ ನರಸಿಂಹ, ಸಂಗಯ್ಯ, ಗೀತಾಸತೀಶ್, ಎಸ್.ಟಿ. ಪುಷ್ಪ, ಟಿ.ಎಸ್. ಜಯಮ್ಮ, ಬಿ.ಎಸ್. ವಿನಯ್, ಮುಜೀಬ್, ರಘು, ರವೀಶ್ ಗೌಡ ಮುಂತಾದವರಿದ್ದರು.
#JDSShivamogga #Deepaksing #ಜೆಡಿಎಸ್ ನಗರಾಧ್ಯಕ್ಷ #Jdsshivamogga
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments