Cnewstv / 06.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಸಾರ್ಥಕ ಸುವರ್ಣ : ಬಿ.ವೈ.ರಾಘವೇಂದ್ರರವರ ಕೊಡುಗೆ ಶಿವಮೊಗ್ಗ ಜಿಲ್ಲೆಗೆ ಬಹಳಷ್ಟಿದೆ.
ಶಿವಮೊಗ್ಗ : ಮೂರು ಬಾರಿ ಲೋಕಸಭಾ ಸದಸ್ಯರಾಗಿರುವ ಮತ್ತು ಜೀವನದ 50 ವರ್ಷಗಳನ್ನು ಪೂರೈಸಿರುವ ಬಿ.ವೈ.ರಾಘವೇಂದ್ರ ಅವರಿಗೆ ಮಲೆನಾಡು ವೀರಶೈವ ಲಿಂಗಾಯಿತ ಮಠಾಧೀಶರರ ಪರಿಷತ್ತು ವತಿಯಿಂದ ಸಾರ್ಥಕ ಸುವರ್ಣ ಎಂಬ ಹೆಸರಲ್ಲಿ ಡಿ. 8 ರಂದು ಸಂಜೆ 5.30 ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬಿ.ವೈ.ರಾಘವೇಂದ್ರರವರ ಕೊಡುಗೆ ಜಿಲ್ಲೆಗೆ ಬಹಳಷ್ಟಿದೆ. ಅಭಿವೃದ್ಧಿ ಹರಿಕಾರ ಎಂದೇ ಜನಪ್ರಿಯರಾಗಿದ್ದಾರೆ. ಸಿಗಂದೂರು ಸೇತುವೆ, ರಾಷ್ಟಿçÃಯ ಹೆದ್ದಾರಿ, ರೈಲ್ವೆ ಯೋಜನೆಗಳು, ನೀರಾವರಿ, ವಿಮಾನ ನಿಲ್ದಾಣ ಹೀಗೆ ಹಲವು ಅಭಿವೃದ್ಧಿಗಳನ್ನು ಮಾಡಿದ್ದಾರೆ. ಮಠಮಂದಿರಗಳಿಗೆ ಅನುದಾನ ಸರ್ವ ಜನಾಂಗದವರ ಕಲ್ಯಾಣ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಕೊಡುಗೆ ನೀಡಿರುವ ಬಿ.ವೈ.ರಾಘವೇಂದ್ರರವರನ್ನು ಸನ್ಮಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
– ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ
ನಮ್ಮ ಸಾನಿಧ್ಯದಲ್ಲಿ ಹೊಂಬುಜ ಹುಂಚಾ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಮಹಾಸ್ವಾಮೀಜಿ, ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾನಂದ ಮಹಾಸ್ವಾಮಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶರಣ ಸಾಹಿತ್ಯ ಪರಿಷತ್‌ನ ರಾಷ್ಟಿçÃಯ ಅಧ್ಯಕ್ಷ ಡಾ. ಶ್ರೀ ಸೋಮಶೇಖರ್ ಉಪನ್ಯಾಸ ನೀಡಲಿದ್ದಾರೆ. ರಾಯಚೂರಿನ ಹಿಂದೂಸ್ತಾನಿ ಗಾಯಕ ಪಂಡಿತ್ ಅಂಬಯ್ಯನುಲಿ ಅವರಿಂದ ವಚನ ಸಂಗೀತ ಕಾರ್ಯಕ್ರಮ ಇರುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಡೆಶ್ರೀಗಳಾದ ಮಹಂತಸ್ವಾಮಿ, ಬಿಳಕಿ ಶ್ರೀಗಳಾದ ರಾಚೋಟೇಶ್ವರ ಸ್ವಾಮಿ, ತೋಗರ್ಸಿಯ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಮಾಜದ ಮುಖಂಡರುಗಳಾದ ಡಾ. ಧನಂಜಯ್ ಸರ್ಜಿ, ಜ್ಯೋತಿಪ್ರಕಾಶ್,ಮಹೇಶ್ ಮೂರ್ತಿ ಸಿ. ಶಾಂತವೀರಪ್ಪ, ರುದ್ರೇಶ್, ಮೊದಲಾದವರು ಇದ್ದರು.
#BYRagavendra #Shivamogga #ಸಾರ್ಥಕ ಸುವರ್ಣ #ಡಾ.ಮಲ್ಲಿಕಾರ್ಜುನಮುರುಘರಾಜೇಂದ್ರ #ಮಲೆನಾಡು ವೀರಶೈವ ಲಿಂಗಾಯಿತ ಮಠಾಧೀಶರರ ಪರಿಷತ್ತು..
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments