Cnewstv / 05.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಆದಿಚುಂಚನಗಿರಿ ಕಾಲೇಜು ವಿದ್ಯಾರ್ಥಿನಿ ಸಾವು. ಪೋಷಕರ ಆಕ್ರೋಶ.. ಬೆಳಕಿಗೆ ಬಾರದ ಕಾರಣ…
ಶಿವಮೊಗ್ಗ : ಇಂದು ಬೆಳಗ್ಗೆ ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಆದಿಚುಂಚನಗಿರಿಯಲ್ಲಿ ದುರ್ಘಟನೆ ಒಂದು ನಡೆದಿದೆ. ಪದವಿ ಪೂರ್ವ ವಿದ್ಯಾರ್ಥಿಯಾಗಿದ್ದ ಮೇಘಶ್ರೀ ಎನ್ನುವರು ಇಂದು ಶಾಲೆ ನಡೆಯುತ್ತಿದ್ದ ಸಮಯದಲ್ಲಿಯೇ ಕಟ್ಟಡದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿತನ ತೋರಿಸಿರುವ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಚನ್ನಗಿರಿ ಮೂಲದ ಮೇಘಶ್ರೀ ಆದಿಚುಂಚನಗಿರಿ ಹಾಸ್ಟೆಲ್ ನಲ್ಲಿ ಓದುತ್ತಿದ್ದಳು. ಇಂದು ಬೆಳಗ್ಗೆ 11 ಗಂಟೆ ಸಮಯಕ್ಕೆ ಸಾವನ್ನಪ್ಪಿದ್ದಾರೆ. ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿದ್ದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ಬೇಜವಾಬ್ದಾರಿತನವನ್ನು ತೋರಿಸಿದ್ದಾರೆ ಎನ್ನುವುದು ಪೋಷಕರ ಆರೋಪ.
ಮೇಘನ ಪೋಷಕರು ಕಾಲೇಜಿಗೆ ಬಂದು ನಡೆದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬಂದ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿಗಳು ಒಳಗೆ ಬಿಡುವುದಿಲ್ಲ ಎಂದು ಗೇಟ್ ಮುಚ್ಚಿದ್ದಾರೆ ಇದರಿಂದ ಆಕ್ರೋಶಗೊಂಡ ಮೇಘನ ಪೋಷಕರು ಹಾಗೂ ಸಂಬಂಧಿಕರು ಗೇಟ್ ಮುರಿಯಲು ಮುಂದಾಗಿದ್ದು ಪರಿಸ್ತಿತಿ ಕೈ ಮೀರಬಾರದು ಎಂಬ ಕಾರಣ ಪೊಲೀಸರು ಗೇಟ್ ತೆರೆದು ಪೋಷಕರಿಗೆ ಒಳಗೆ ಬಿಟ್ಟರು. ನಂತರ ಕಾಲೇಜು ಸಿಬ್ಬಂದಿಗಳಿಂದ ಮಾಹಿತಿಯನ್ನ ಪಡೆದುಕೊಳ್ಳಲು ಪೊಷಕರು ಮುಂದಾದ್ರೆ ಕಾಲೇಜಿಗೆ ಸಂಭಂದಿಸಿದ ಯಾರೋಬ್ಬರು ಪೋಷಕರ ಕೈಗೆ ಸಿಗಲಿಲ್ಲಾ ಇದರಿಂದ ಕೋಪ ಗೊಂಡ ಮೇಘನಾ ಕಡೆಯವರು ರಸ್ತೆ ತಡೆಯನ್ನ ಮಡೆಸಿ ಆಕ್ರೋಷ ವ್ಯಕ್ತಪಡಿಸಿದರು.
ಮೇಘನಾ ಸಾವಿನ ವಿಷಯ ತಿಳಿಯುತ್ತಿದ್ದಂತೆ ಅನೇಕ ಸಂಘ ಸಂಸ್ಥೆಗಳು ಪೋಷಕರ ನೆರವಿಗೆ ಧಾವಿಸಿದ್ದಾರೆ. ಅದರೆ ಮೇಘನಾ ಸಾವಿನ ವಿಷಯ ತನಿಖೆಗಿಂತ ಪೊಲೀಸರಿಗೆ ಕಾಲೇಜು ಸಿಬ್ಬಂದಿ ಹಾಗೂ ಆಡಳಿತ ವರ್ಗದವರಿಗೆ ಹೆಚ್ಚು ರಕ್ಷಣೆ ಕೊಡುವುದರ ಕಡೆಗೆ ಗಮನ ಎನ್ನುವುದು ಅಲ್ಲಿ ನೆರೆದಿದ್ದವರ ಅಭಿಪ್ರಾಯ. ಈ ನಡುವೆ ಪೋಷಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಕೂಡ ನಡೆದಿದ್ದು, ಮೇಘನ ಸಾವಿನ ಕಾರಣಗಳು ಮಾತ್ರ ಇನ್ನೂ ತಿಳಿದುಬಂದಿಲ್ಲಾ. ಸಧ್ಯ ಕಾಲೇಜು ಆವರಣಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಕೆ.ಎಸ್.ಆರ್.ಪಿ ತುಕಡಿಸೇರಿದಂತೆ ಹೆಚ್ಚಿನ ಪೊಲೀಸ್ ಬಂದೊಬಸ್ತೆ ನೀಡಲಾಗಿದೆ.
#Adichunchanagiri PU College Shimoga #Student Death #Shivamogga #Crime
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments