Cnewstv / 04.12.2023/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಜಿಲ್ಲಾ ಮಟ್ಟದ ಕರೋಕೆ ಸ್ಪರ್ಧೆ..
ಶಿವಮೊಗ್ಗ : ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರೋಕೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಆಸಕ್ತ ಹಾಗೂ ಹವ್ಯಾಸಿ ಗಾಯಕರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಷರತ್ತುಗಳು…
ಈ ಸ್ಪರ್ಧೆಯು ಅರ್ಹತಾ ಸುತ್ತು ಒಳಗೊಂಡಿದ್ದು, ಇದರಲ್ಲಿ ಆಯ್ಕೆಯಾಗುವ ಸ್ಪರ್ಧಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು. ಆಯ್ಕೆಯಾಗದವರು ಸ್ಪರ್ಧೆಯಿಂದ ನಿರ್ಗಮಿಸುತ್ತಾರೆ.
ವಿವಿಧ ಹಂತಗಳ ಸ್ಪರ್ಧೆಯು ನಡೆಯಲಿದ್ದು ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ. ನಂತರ ಈ ಪೈಕಿ ಅಂತಿಮವಾಗಿ ಆಯ್ಕೆಯಾಗುವ ಸ್ಪರ್ಧಿಗಳ ನಡುವೆ ಫೈನಲ್ ಹಣಾಹಣಿ ನಡೆಯಲಿದೆ.
ಪ್ರವೇಶ ಶುಲ್ಕ: 100 ರೂಪಾಯಿಗಳು
ವಯೋಮಿತಿ : ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು 20 ರಿಂದ 35 ರ ವಯೋಮಿತಿ ಹಾಗೂ 36 ರಿಂದ 55 ರ ವಯೋಮಿತಿಯವರ ನಡುವೆ ಸ್ಪರ್ಧೆ ನಡೆಯಲಿದೆ.
ಹೆಸರು ನೀಡಲು ಸಂಪರ್ಕಿಸಿ
ಆಸಕ್ತರು ಪತ್ರಿಕಾ ಭವನ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆರ್ ಟಿ ಒ ರಸ್ತೆ ಶಿವಮೊಗ್ಗ ಕ್ಕೆ ನೇರವಾಗಿ ಭೇಟಿಯಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಅಥವಾ ಹೊನ್ನಾಳಿ ಚಂದ್ರಶೇಖರ್ : 9844518866 , ರಾಮಚಂದ್ರ ಗುಣಾರಿ 9448093362 , ಸಂತೋಷ್ 9632541408 ಇವರನ್ನ ವಾಟ್ಸ್ಯಾಪ್ ಮೆಸೇಜ್ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ಹೆಸರು ನೋಂದಾವಣಿಗೆ ಕೊನೆಯ ದಿನಾಂಕ : ಡಿಸೆಂಬರ್ 14 2023.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments