Www.cnewstv.in / 17.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ದಸರಾ : ಆನೆಗಳಿಗೆ, ಕಾವಾಡಿಗರಿಗೆ ಹಾಗೂ ಅರಣ್ಯ ಇಲಾಖೆಗೆ ಆಮಂತ್ರಣ.
ಶಿವಮೊಗ್ಗ : ಶಿವಮೊಗ್ಗ ದಸರಾದ ವಿಜಯ ದಶಮಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊರುವ ಸಕ್ರೆಬೈಲು ಆನೆ ಬಿಡಾರದ ಆನೆಗಳಾದ ಸಾಗರ, ನೇತ್ರಾವತಿ ಮತ್ತು ಹೇಮಾವತಿಗೆ ಇಂದು ಪಾಲಿಕೆ ಮೇಯರ್ ನೇತೃತ್ವದಲ್ಲಿ ಆನೆ ಬಿಡಾರಕ್ಕೆ ತೆರಳಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದಸರಾ ಉತ್ಸವ ಸಮಿತಿಯ ಅಧಿಕಾರಿಗಳು, ಪಾಲಿಕೆ ಸದಸ್ಯರು, ಮತ್ತು ನಗರ ವಿಧಾನ ಸಭಾ ಕ್ಷೇತ್ರದ ಸದಸ್ಯರಾದ ಎಸ್.ಎನ್. ಚನ್ನಬಸಪ್ಪನವರು ಆನೆಬಿಡಾರದಲ್ಲಿ ಮೂರೂ ಆನೆಗಳಿಗೆ ಬಾಳೆಹಣ್ಣು, ಕಬ್ಬು ಹಾಗೂ ಸಿಹಿ ತಿನ್ನಿಸಿ ಅಲಂಕಾರ ಮಾಡಿ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಇದಕ್ಕೂ ಮುನ್ನ ಮಹಿಳಾ ಸದಸ್ಯರು ಎಲ್ಲಾ ಆನೆಗಳಿಗೆ ಅರಿಶಿಣ ಕುಂಕುಮ ಹಚ್ಚಿ ಪುಷ್ಪನಮನ ಸಲ್ಲಿಸಿದರು. ಆನೆಗಳು ಕೂಡ ಸಂಭ್ರಮದಿಂದ ಚನ್ನಬಸಪ್ಪ ಮತ್ತು ಮೇಯರ್ ಶಿವಕುಮಾರ್ ಹಾಗೂ ಎಲ್ಲಾ ಪಾಲಿಕೆ ಸದಸ್ಯರಿಗೆ ಸೊಂಡಿಲು ಎತ್ತಿ ಗೌರವ ಸಲ್ಲಿಸಿತು. ಅಧಿಕೃತವಾಗಿ ಮೆರವಣಿಗೆಗೆ ಪಾಲಿಕೆ ವತಿಯಿಂದ ಆನೆಗಳಿಗೆ ಮತ್ತು ಕಾವಾಡಿಗರಿಗೆ ಹಾಗೂ ಅರಣ್ಯ ಇಲಾಖೆಗೆ ಆಮಂತ್ರಣವನ್ನು ನೀಡಲಾಯಿತು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments