Www.cnewstv.in / 16.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
2 ನಿಮಿಷದಲ್ಲಿ 8 ಬಾಳೆಹಣ್ಣು, 8 ಕೊಟ್ಟೆ ಕಡಬು ಗುಳಂ..
ಶಿವಮೊಗ್ಗ: ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ನಡೆದ ಆಹಾರ ದಸರಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ 2 ನಿಮಿಷದಲ್ಲಿ ಕೊಟ್ಟ ಕಡುಬು ಅವರೇಕಾಳು ಸಾಂಬಾರ್ ತಿನ್ನುವ ಸ್ಪರ್ಧೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಸಾಂಕೇತಿಕ ಚಾಲನೆ ನೀಡಿದರು.
ಈ ಸ್ಪರ್ಧೆಯಲ್ಲಿ ಮಹಿಳೆಯರಲ್ಲಿ 8 ಕೊಟ್ಟೆ ಕಡುಬು ತಿಂದ ಶಿವಮ್ಮ ಪ್ರಥಮ, ಜ್ಯೋತಿ ಶ್ರೀನಿವಾಸ ದ್ವಿತೀಯ, ಗೀತಾ ತೃತೀಯ ಬಹುಮಾನ ಪಡೆದರು.
ಪುರುಷರಲ್ಲಿ 6 ಕೊಟ್ಟೆ ಕಡುಬು ತಿಂದ ವಿನೋದ್ ಪ್ರಥಮ, ರವಿಕಿರಣ್ ದ್ವಿತೀಯ, ನಾಗರಾಜ್ ತೃತೀಯ ಬಹುಮಾನ ಪಡೆದರು.
ಬಾಳೆಹಣ್ಣು ತಿನ್ನುವ ಸ್ಪರ್ಧೆ…
ಕೆ.ಎನ್. ಗೀತಾ 8 ಬಾಳೆಹಣ್ಣು ತಿಂದು ಪ್ರಥಮ, ಸುಜಾತಾ ಎ.ಎನ್. ದ್ವಿತೀಯ, ತೃತೀಯ ಬಹುಮಾನ ಉಷಾ ಪಡೆದಿದ್ದಾರೆ.
ಪುರುಷರಲ್ಲಿ ದೀಪಕ್ ಶೆಟ್ಟಿ 7 ಬಾಳೆಹಣ್ಣು ತಿಂದು ಪ್ರಥಮ ಸ್ಥಾನ, ಮಧು ದ್ವಿತೀಯ, ರಾಜಶೇಖರ್ ತೃತೀಯ ಬಹುಮಾನ ಪಡೆದರು.
ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷಿಶಂಕರ ನಾಯಕ, ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಯಮುನಾ ರಂಗೇಗೌಡ, ಸುವರ್ಣಾ ಶಂಕರ್, ಆಹಾರ ದಸರಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಪ್ಪ, ಸದಸ್ಯರಾದ ಬಾನುಮತಿ, ವಿನೋದ್‌ಕುಮಾರ್, ಆರತಿ ಆ.ಮಾ. ಪ್ರಕಾಶ್ ಮತ್ತಿತರರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments