Www.cnewstv.in / 13.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ ದಾಖಲು..
ಶಿವಮೊಗ್ಗ ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ರಾಗಿಗುಡ್ಡ-ಶಾಂತಿನಗರದ ಕಲ್ಲುತೂರಾಟ ಗಲಭೆ ವಿಚಾರವಾಗಿ ನೆನ್ನೆ ಬಿಜೆಪಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿತ್ತು. ಈ ಸಭೆಯಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153ಎ, 5೦4 ಕಾಯ್ದೆಯಡಿ ಸುಮೋಟೋ ಪ್ರಕರಣ ದಾಖಲಾಗಿದೆ.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪನವರು, ಹಿಂದೂ ಸಮಾಜ ಇವತ್ತಿನ ತನಕ ಕಾನೂನನ್ನು ಕೈಗೆ ತೆಗೆದುಕೊಂಡಿಲ್ಲ. ಹರ್ಷ ಕೊಲೆಯಾದಾಗ ನಾವು ಕೂಡ ಲಾಂಗು ಮಚ್ಚು ಹಿಡಿದಿದ್ದರೆ ಏನಾಗ್ತಿತ್ತು ?? ಮಾರಿ ಜಾತ್ರೆಯಲ್ಲಿ ಕುರಿ ಕಡಿದಂತೆ ಕಡಿದು ಹಾಕಿ ಬಿಡ್ತಾ ಇದ್ದೆವು. ನಾವು ಆ ಬದುಕು ಮಾಡಲಿಲ್ಲ ಈ ದೇಶದಲ್ಲಿರುವ ಹಿಂದುಗಳು ಮುಸಲ್ಮಾನರು ಒಟ್ಟಾಗಿರಬೇಕು ಎಂಬ ಆಸೆ ಇದೆ ಆದರೆ ಒಟ್ಟಾಗಿಸಲು ಇವರು ಬಿಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments