Www.cnewstv.in / 12.10.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಆಕಾಶದಲ್ಲೇ ಸುತ್ತು ಹಾಕಿ, ತಡವಾಗಿ ಲ್ಯಾಂಡ್ ಆದ ಇಂಡಿಗೋ ವಿಮಾನ.
ಬಿ ಎಸ್ ವೈ ಪ್ರಯಾಣ ಮಾಡುತ್ತಿದ್ದ ವಿಮಾನ..
ಶಿವಮೊಗ್ಗ : ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಇಂಡಿಗೋ ವಿಮಾನ 20 ನಿಮಿಷಗಳ ಕಾಲ ತಡವಾಗಿ ಲ್ಯಾಂಡ್ ಆಗಿದೆ.
ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ಮಳೆ ಮತ್ತು ಮಂಜು ಮುಸುಕಿದ ವಾತಾವರಣವಿದ್ದ ಕಾರಣ ವಿಸಿಬಿಲಿಟಿ ಕಡಿಮೆ ಇತ್ತು ಹಾಗಾಗಿ ಆಕಾಶದಲ್ಲಿಯೇ ಇಂಡಿಗೋ ವಿಮಾನ 5 ಸುತ್ತು ಹಾಕಿದೆ. ನಂತರ ನಿಗದಿತ ಸಮಯಕ್ಕಿಂತ 20 ನಿಮಿಷಗಳ ಕಾಲ ತಡವಾಗಿ ಲ್ಯಾಂಡ್ ಆಗಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕೂಡ ಅದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದು ಬೆಳಿಗ್ಗೆ 9:50ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನ ಬೆಳಿಗ್ಗೆ 11.05 ಕ್ಕೆ ಶಿವಮೊಗ್ಗದ ಸೋಗಾನೆ ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಬೇಕಾಗಿತ್ತು, ಆದರೆ ಹವಾಮಾನ ವೈಪರಿತ್ಯದಿಂದ ತಡವಾಗಿ ಲ್ಯಾಂಡ್ ಆಗಿದೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments