Cnewstv / 7.09.2023 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಇವತ್ತಿನ ಮಕ್ಕಳಿಗೆ ಸುಖದೇವ್ ಹಾಗೂ ರಾಜಗುರು ಬಗ್ಗೆ ಹೇಳುವ ಅವಶ್ಯಕತೆ ಇಲ್ಲವಾ ??
ಶಿವಮೊಗ್ಗ : ಇವತ್ತಿನ ಮಕ್ಕಳಿಗೆ ಸುಖದೇವ್ ಹಾಗೂ ರಾಜಗುರು ಬಗ್ಗೆ ಹೇಳುವ ಅವಶ್ಯಕತೆ ಇಲ್ಲವಾ..ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕ ಬದಲಾವಣೆ ಮಾಡಿದು ದ್ವೇಷದ ರಾಜಕಾರಣವಾಗಿದೆ ವಿಧಾನಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ರವರು ಹೇಳಿದ್ದಾರೆ.
6 ಮತ್ತು 10ನೇ ತರಗತಿಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ 9 ಪಠ್ಯಗಳನ್ನು, ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 9 ಪಠ್ಯಪುಸ್ತಕಗಳನ್ನು ತಿದ್ದುಪಡಿ ಮಾಡಲಾಗಿದೆ. ಮುಖ್ಯವಾಗಿ ಡಾ ಕೆಬಿ ಹೆಗ್ಡೆವಾರ್ ರವರ ಅಮರ ಪುತ್ರರು, ಚಕ್ರವರ್ತಿ ಸೂಲಿಬೆಲೆ, ಶತಾವಧಾನಿ ಗಣೇಶ್ ರವರ ದೇಶಪ್ರೇಮ ಕುರಿತಾದಂತೆ ಮಕ್ಕಳ ಮನಸ್ಸಿನ ಭಾವನೆಗಳನ್ನು ಕುರಿತು ಬರೆದಿದ್ದಂತಹ ಪಠ್ಯಗಳನ್ನು ತೆಗೆದುಹಾಕಿ ಉರುಸಿನಲ್ಲಿ ಭಾವೈಕ್ಯತೆ, ನೆಹರು ಮಗಳಿಗೆ ಬರೆದ ಪತ್ರ, ಯುದ್ಧ ಮುಂತಾದ ಪಠ್ಯಗಳನ್ನು ಸೇರಿಸಿದ್ದಾರೆ ಈ ಎಲ್ಲವೂ ಕೂಡ ತುಷ್ಟೀಕರಣದ ಪಾಠಗಳಾಗಿವೆ. ಇದನ್ನು ಬದಲಾವಣೆ ಮಾಡುವ ಮೂಲಕ ದ್ವೇಷ ಮೂಡಿಸಿದ್ದಾರೆ.
ಯಾವುದೇ ಪಠ್ಯ ಬದಲಾವಣೆ ಮಾಡುವುದಕ್ಕೆ ಕ್ಯಾಬಿನೆಟ್ ನಲ್ಲಿ ಅಲ್ಲ. ಅದು ಬದಲಾಗಿ ಶಿಕ್ಷಣ ತಜ್ಞರ ಸಮಿತಿ ರಚನೆಯಾಗಿ ಅದರ ಮೂಲಕ ಆಗಬೇಕು. ಯಾವುದು ಬೇಡ ಎಂಬ ತೀರ್ಮಾನವನ್ನು ಆ ಸಮಿತಿ ತೆಗೆದುಕೊಳ್ಳಬೇಕು ನಂತರ ಮಾತ್ರ ಪಠ್ಯಪುಸ್ತಕಗಳು ಬದಲಾವಣೆಯಾಗಬೇಕು ಆದರೆ ರಾಜ್ಯ ಸರ್ಕಾರ ಇದ್ಯಾವುದನ್ನು ಮಾಡದೆ ಬದಲಾವಣೆ ಮಾಡುವ ಮೂಲಕ ಅಸಹಿಷ್ಣುತೆ ಮೂಡಿಸಿದೆ ಎಂದರು.
ವಿಡಿಯೋ ನ್ಯೂಸ್ ಗಾಗಿ…
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
Recent Comments